ಆರೋಗ್ಯ

ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ರೆಡಿಯಾಲಾಜಿಸ್ಟ್ ಅರೆಸ್ಟ್

Views: 120

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೆಡಿಯಾಲಾಜಿಸ್ಟ್ ಜಯಕುಮಾ‌ರ್ ನನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿ ಜಯಕುಮಾ‌ರ್ ಬಂಧನಕ್ಕೆ ಆಗ್ರಹಿಸಿ ನಿನ್ನೆ ಧರಣಿ ನಡೆದಿತ್ತು ಕರ್ನಾಟಕ ತಕ್ಷಣ ವೇದಿಕೆ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಇನ್ಸೆಕ್ಟರ್ ತಿಪ್ಪೇಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದರು ಘಟನೆ ನಡೆದು 10 ದಿನ ಕಳೆದರೂ ಆರೋಪಿಯನ್ನು ಬಂಧಿಸಿಲ್ಲ. ಈ ಕೂಡಲೇ ಆನೇಕಲ್ ಪೊಲೀಸರು ಆರೋಪಿಯನ್ನು ಬಂಧಿಸಬೇಕು ಇಲ್ಲದಿದ್ದರೆ ಆನೇಕಲ್ ಪಟ್ಟಣ ಬಂದ್ ಮಾಡುವ ಎಚ್ಚರಿಕೆ ನೀಡಲಾಗಿತ್ತು.

ಇದೀಗ ಆನೇಕಲ್ ಠಾಣೆ ಪೊಲೀಸರು ಪಾಲಿಸಲು ಆರೋಪಿ ಜಯಕುಮಾರ್ ಅರೆಸ್ಟ್ ಮಾಡಿದ್ದಾರೆ.

 

Related Articles

Back to top button
error: Content is protected !!