ಜನಮನ

ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್, ಶಾಲೆಗಳಿಗೆ ರಜೆ ಇರುತ್ತಾ?

ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್ ಇರಲಿದೆ. ಹಾಗಾದ್ರೆ ಖಾಸಗಿ ವಾಹನಗಳ ಅವಲಂಬಿಸಿರು ಶಾಲೆಗಳು ರಜೆ ಘೋಷಿಸಿದ್ದಾರಾ? ಏನ್ ಕಥೆ? ನೋಡಿ ಇಲ್ಲಿದೆ ಮಾಹಿತಿ.

Views: 0

ಶಕ್ತಿ ಯೋಜನೆ ಜಾರಿ ಆದ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸ್ತಿದ್ದ ಖಾಸಗಿ ಸಾರಿಗೆ ಒಕ್ಕೂಟಗಳು, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಬಂದ್ ಅಸ್ತ್ರ ಪ್ರಯೋಗ ಮಾಡುತ್ತಿವೆ.

ಶಕ್ತಿ ಯೋಜನೆ ಜಾರಿ ಆದ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸ್ತಿದ್ದ ಖಾಸಗಿ ಸಾರಿಗೆ ಒಕ್ಕೂಟಗಳು, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಬಂದ್ ಅಸ್ತ್ರ ಪ್ರಯೋಗ ಮಾಡುತ್ತಿವೆ.

ಹತ್ತಾರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಂದ್‍ಗೆ ಕರೆ ನೀಡಿದ್ದು, ಸೋಮವಾರ ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್ ಆಗಲಿದೆ. ಈಗಾಗಲೇ ಸರ್ಕಾರದ ಜೊತೆಗೆ ಮಾತುಕತೆ ವಿಫಲವಾಗಿದ್ದು, ಭಾನುವಾರ ರಾತ್ರಿ 12 ರಿಂದಲೇ ಬಿಸಿ ತಟ್ಟಲಿದೆ.

ಸೋಮವಾರ ಬಂದ್ ದಿನ ಆಟೋ ರಿಕ್ಷಾಗಳು, ಓಲಾ, ಊಬರ್ ಆಟೋಗಳು, ಶಾಲಾ ಆಟೋಗಳು, ಕಂಪನಿಗಳ ಕ್ಯಾಬ್, ಏರ್ ಪೋರ್ಟ್ ಕ್ಯಾಬ್‍ಗಳು ರಸ್ತೆಗಿಳಿಯೋದು ಡೌಟ್. ಇನ್ನು ಸ್ಕೂಲ್ ವ್ಯಾನ್‍ಗಳು, ಖಾಸಗಿ ಬಸ್‍ಗಳು ಕೂಡ ಬಂದ್‍ಗೆ ಬೆಂಬಲ ಸೂಚಿಸಿವೆ.

ಸೋಮವಾರ ಫೆಡರೇಶನ್ ಆಫ್ ಪ್ರೈವೇಟ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ಬಂದ್‍ಗೆ ಕರೆ ನೀಡಿರುವುದರಿಂದ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳ ಕಾರ್ಯನಿರ್ವಹಣೆಗೆ ಹೊಡೆತ ಬೀಳುವ ಸಾಧ್ಯತೆ ಇದೆ.

ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿಲ್ಲ. ಪೋಷಕರೇ ಮಕ್ಕಳನ್ನು ಶಾಲೆಗೆ ತಂದು ಬೀಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ

ಪ್ರಯಾಣಿಸಲು ಖಾಸಗಿ ವಾಹನಗಳಿಗೆ ಸಂಬಂಧಿಸಿದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ’

ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ನಗರದಲ್ಲಿ 3 ಲಕ್ಷ ಆಟೋ, ಒಂದೂವರೆ ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ,  ಬಸ್‍ಗಳು ಬಂದ್ ಆಗಲಿದ್ದು, ಸಿಲಿಕಾನ್ ಸಿಟಿ ಜನರಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆಗಳಿವೆ.

.

Related Articles

Back to top button
error: Content is protected !!