ಕರಾವಳಿ
ಸುರತ್ಕಲ್: 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ
Views: 85
ಮಂಗಳೂರು: 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಮುಲ್ಕಿ ಕಂದಾಯ ನಿರೀಕ್ಷಕ, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಯನ್ನು ಬಂಧಿಸಲಾಗಿದೆ.
ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್.ದಿನೇಶ್ ಬಂಧಿತ ಆರೋಪಿ. ಆಸ್ತಿಯ ಪಹಣಿಯಲ್ಲಿ ಹೆಸರು ಸೇರಿಸಲು 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಹೆಸರು ಸೇರ್ಪಡಗೆ ಅರ್ಜಿ ಸಲ್ಲಿಸಿದ್ದರೂ ಒಂದು ವರ್ಷದಿಂದ ಕ್ರಮ ಕೈಗೊಳ್ಳದೇ ಫೈಲ್ ಹಾಗೆಯೇ ಇರಿಸಿದ್ದ
ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟಿದ್ದ. ಈ ಕುರಿತು ಮಂಗಳೂರು ಲೋಕಾಯುಕ್ತ ಕಚೇರಿಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದರು. ಮಂಗಳೂರು ಹೊರವಲಯದ ಸುರತ್ಕಲ್ ಜಂಕ್ಷನ್ ಬಳಿ 4 ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ರೆಡ್‌ಹ್ಯಾಂಡ್ ಆಗಿ ಕಂದಾಯ ನಿರೀಕ್ಷಕ ದಿನೇಶ್ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್‌ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.