ಕರಾವಳಿ

ಶಿರೂರು ನಾಪತ್ತೆಯಾದ ಲಾರಿ, ಮೂವರಿಗಾಗಿ ಹುಡುಕಾಟಕ್ಕೆ ಬಂದ ಈಶ್ವರ್ ಮಲ್ಪೆ ತಂಡಕ್ಕೆ  ಅಧಿಕಾರಿಗಳ ನಿರಾಕರಣೆ.‌!

Views: 710

ಉತ್ತರ ಕನ್ನಡ : ಅಂಕೋಲಾದ ಶಿರೂರಿನ ಬಳಿ ಗಂಗಾವಳಿ ನದಿಯಲ್ಲಿ ಅಮಾವಾಸ್ಯೆ ದಿನ ಲಾರಿ ಪತ್ತೆ ಕಾರ್ಯಾಚರಣೆಗೆ ಆಗಮಿಸಿದ್ದ ಉಡುಪಿಯ ಈಜು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ನೀರಿಗಿಳಿಯಲು ಅಧಿಕಾರಿಗಳು ನಿರಾಕರಿಸಿದ ಕಾರಣ ತಂಡ ವಾಪಸ್ ತೆರಳಿದೆ.

ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾದ ಲಾರಿ ಹಾಗೂ ಇನ್ನು ಮೂವರಿಗಾಗಿ ಹುಡುಕಾಟ ನಡೆಸುವ ಸಂಬಂಧ ಈ ಹಿಂದೆ ತಿಳಿಸಿದಂತೆ ಈಶ್ವರ್ ಮಲ್ಪೆ ತಂಡದ ಸದಸ್ಯರು, ಗಂಗಾವಳಿ ನದಿಯಲ್ಲಿ ಅಮಾವಾಸ್ಯೆ ದಿನ ಕಾರ್ಯಾಚರಣೆ ನಡೆಸಲು ಆಗಮಿಸಿದ್ದರು.ಸಾಮಾನ್ಯವಾಗಿ ಅಮಾವಾಸ್ಯೆ ದಿನ ನೀರು ಇಳಿತವಿರುವ ಕಾರಣ ಆ ಎರಡು ಗಂಟೆಗಳಲ್ಲಿ ಹೆಚ್ಚಿನ ಆಳಕ್ಕೆ ತೆರಳಿ ಹುಡುಕಾಟ ನಡೆಸಲು ಮುಂದಾಗಿದ್ದವರಿಗೆ ಜಿಲ್ಲಾಡಳಿತ ಅನುಮತಿ ನಿರಾಕರಣೆ ಮಾಡಿದೆ.

ನೀರು ಕೆಂಪಾಗಿರುವ ಕಾರಣ ಕಾರ್ಯಾಚರಣೆಗೆ ಇಳಿದಲ್ಲಿ ಅವರೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ಕಾರಣ ಜಿಲ್ಲಾಡಳಿತ ಹಾಗೂ ಪೊಲೀಸರು ನದಿಯಲ್ಲಿ ಮುಳುಗಲು ಅವಕಾಶ ನೀಡಿಲ್ಲ. ಇದರಿಂದ ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಮಾಡಿ ಅರ್ಜುನ್ ಲಾರಿಯನ್ನು ಹುಡುಕಾಡುವ ಉದ್ದೇಶದಿಂದ ಸ್ಥಳೀಯರೊಂದಿಗೆ ಆಗಮಿಸಿದ್ದ ಈಶ್ವರ್ ತಂಡಕ್ಕೆ ಪೊಲೀಸರು ವಿನಂತಿಸಿ, ಇಳಿಯದಂತೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರ್ ಮಲ್ಪೆ, ”ಗಂಗಾವಳಿ ನದಿಯಲ್ಲಿ ಕೆಂಪು ನೀರು ಇದ್ದು, ಮಳೆ ಕೂಡ ಜೋರಾಗಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಅಧಿಕಾರಿಗಳು ಹಾಗೂ ಪೊಲೀಸರು ನದಿಗೆ ಇಳಿಯಲು ಅನುಮತಿ ನೀಡಿಲ್ಲ. ಅವರು ಹೇಳಿದಂತೆ ಮಳೆ ಜೋರಾಗಿರುವ ಕಾರಣ ನೀರು ರಭಸವಾಗಿ ಹರಿಯುತ್ತಿದ್ದು, ಕಾರ್ಯಾಚರಣೆಯಿಂದ ಅಪಾಯವಾಗುವ ಸಾಧ್ಯತೆ ಇರುವುದರಿಂದ ಅನುಮತಿ ನಿರಾಕರಿಸುತ್ತಿದ್ದಾರೆ. ಆದರೆ ಮುಂದೆ ಜಿಲ್ಲಾಡಳಿತದ ಅನುಮತಿಯೊಂದಿಗೆ ಸ್ಥಳೀಯರು ಆಹ್ವಾನಿಸಿದಾಗ ಬಂದು ಕಾರ್ಯಾಚರಣೆ ನಡೆಸುತ್ತೇವೆ” ಎಂದು ತಿಳಿಸಿದರು.

 

Related Articles

Back to top button