ಕರಾವಳಿ

ಶಿರೂರು ಗುಡ್ಡ ಕುಸಿತ: ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಣ್ಮರೆಯಾದವರಿಗೆ ಶೋಧ

Views: 74

ಉತ್ತರ ಕನ್ನಡ: ಜುಲೈ 16 ರಂದು ಭಾರಿ ಮಳೆಯಿಂದ ಶಿರೂರಿನಲ್ಲಿ ಗಂಗಾವಳಿ ನದಿ ಬಳಿಯ 66ನೇ ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಗಾತ್ರದ ಗುಡ್ಡ ಕುಸಿದು ಭಾರಿ ಅವಘಡ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 11 ಜನರು ಕಣ್ಮರೆಯಾಗಿದ್ದರು. ಈ ಪೈಕಿ 8 ಜನರ ಮೃತದೇಹಗಳು ಸಿಕ್ಕಿವೆ. ಕೇರಳದ ಲಾರಿ ಚಾಲಕ ಅರ್ಜುನ್ ಸೇರಿದಂತೆ ಇನ್ನೂ ಮೂವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ

ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದವರಿಗಾಗಿ ಹಾಗೂ ಲಾರಿ ಪತ್ತೆಗೆ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಹಾಗೂ ಹೆಲಿಕಾಪ್ಟರ್ ಮೂಲಕ ಗುರುವಾರ ಹುಡುಕಾಟ ಆರಂಭವಾಗಿದೆ

ದಡದಿಂದ ಲಾಂಗ್ ಆರ್ಮ್ ಬೂಮರ್ ಯಂತ್ರದ ಮೂಲಕ ನಿರಂತರವಾಗಿ ಡ್ರೆಜ್ಜಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ನಡುವೆ ನೌಕಾನೆಲೆಯ ಹೆಲಿಕಾಪ್ಟರ್ ಮೂಲಕ ಗಂಗಾವಳಿ ನದಿ ಪ್ರದೇಶದಲ್ಲಿ ಮೃತಪಟ್ಟವರಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಇದಲ್ಲದೆ ಲಾರಿ ಹಾಗೂ ನಾಪತ್ತೆಯಾದವರಿಗಾಗಿ ದೆಹಲಿಯಿಂದ ಆಗಮಿಸಿದ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ನಿಂದಲೂ ನದಿ ಹಾಗೂ ನದಿ ತೀರದಲ್ಲಿ ಹುಡುಕಾಟ ಆರಂಭಗೊಂಡಿದೆ.

ಡ್ರೋನ್ ಮುಖಾಂತರ 2.4 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸಬಹುದಾದ, ಮಣ್ಣಿನಲ್ಲಿ 20 ಮೀಟರ್ ಮತ್ತು ನೀರಿನಲ್ಲಿ 70 ಮೀಟರ್ ಆಳದಲ್ಲೂ ಪರೀಕ್ಷೆ ನಡೆಸಬಲ್ಲ ಡ್ರೋನ್ ಆಗಿದೆ. ಹಿಮ, ನೀರು, ಬಂಡೆ ಮತ್ತು ಮರುಭೂಮಿಗಳಲ್ಲಿ ಪತ್ತೆ ಕಾರ್ಯಕ್ಕೆ ಈ ಡ್ರೋನ್ ಬಳಕೆಯಾಗುತ್ತದೆ. ಈ ಸಾಧನವನ್ನು ಇಬ್ಬರು ತರಬೇತಿ ಪಡೆದ ಸೈನಿಕರು ನಿರ್ವಹಿಸುತ್ತಾರೆ. ಭಾರೀ ಪ್ರವಾಹಗಳು ಮತ್ತು ಹಿಮಕುಸಿತಗಳು ಸಂಭವಿಸಿದ ಸ್ಥಳಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ.

ನೆಲದಡಿಯಲ್ಲಿ ಮಾನವ ಉಪಸ್ಥಿತಿಯನ್ನು ಕೂಡ ಇದರಿಂದ ಕಂಡುಹಿಡಿಯಬಹುದು. ಮೃತದೇಹ ಪತ್ತೆ ಕಾರ್ಯಾಚರಣೆಗೂ ಸಹಕಾರಿಯಾಗಲಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಈ ಡ್ರೋನ್ ಅನ್ನು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಳಸಬಹುದು. ಭಾರೀ ಮಳೆ ಮತ್ತು ಗಂಟೆಗೆ 40 ಕಿ.ಮೀ.ವರೆಗೆ ಗಾಳಿಯ ವೇಗದಲ್ಲಿ ಬಳಸಬಹುದು. ಮೇ 2024ರಲ್ಲಿ ಸೇನೆಯು ಇದರ ಪ್ರಯೋಗವನ್ನು ನಡೆಸಿತ್ತು. ಕುಪ್ವಾರ ಮತ್ತು ದೆಹಲಿಯಲ್ಲಿ ಪ್ರಯೋಗ ನಡೆಸಲಾಗಿತ್ತು. ಇದರ ಬೆಲೆ ಮೂರು ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ ಎನ್ನಲಾಗ್ತಿದೆ.

ಭಾರಿ ಮಳೆಗೆ ಕುಸಿದಿದ್ದ ಗುಡ್ಡ; ಜುಲೈ 16 ರಂದು ಭಾರಿ ಮಳೆಯಿಂದ ಶಿರೂರಿನಲ್ಲಿ ಗಂಗಾವಳಿ ನದಿ ಬಳಿಯ 66ನೇ ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಗಾತ್ರದ ಗುಡ್ಡ ಕುಸಿದು ಭಾರಿ ಅವಘಡ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 11 ಜನರು ಕಣ್ಮರೆಯಾಗಿದ್ದರು. ಈ ಪೈಕಿ 8 ಜನರ ಮೃತದೇಹಗಳು ಸಿಕ್ಕಿವೆ. ಕೇರಳದ ಲಾರಿ ಚಾಲಕ ಅರ್ಜುನ್ ಸೇರಿದಂತೆ ಇನ್ನೂ ಮೂವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Related Articles

Back to top button