ಕರಾವಳಿ
ಶಿರೂರು ಗುಡ್ಡ ಕುಸಿತದಲ್ಲಿ ನೃತ್ಯ ಮಾಡುತ್ತಿದ್ದ ಅವಂತಿಕಾ, ಅರ್ಜುನ್ ಸಾವು

Views: 61
ಉತ್ತರ ಕನ್ನಡ:ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಅವಂತಿಕಾ, ಅರ್ಜುನ್ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.ಮಳೆಯಿಂದಾಗಿ ಜುಲೈ 16ರಂದು ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಲಕ್ಷ್ಮಣ್ ಕುಟುಂಬ ಈ ಗುಡ್ಡ ಕುಸಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಎಂದು ತಿಳಿದುಬಂದಿದೆ.
ಗುಡ್ಡ ಕುಸಿತದ ಸ್ಥಳದಲ್ಲಿ ರಸ್ತೆ ಬದಿಯಲ್ಲಿದ್ದ ಅಂಗಡಿ ಕೊಚ್ಚಿಹೋಗಿತ್ತು. ಒಂದೇ ಕುಟುಂಬದ ಐವರು ಇದರಿಂದಾಗಿ ಮೃತಪಟ್ಟಿದ್ದರು. ಲಕ್ಷ್ಮಣ್ ಮಕ್ಕಳಾದ ಅವಂತಿಕಾ, ಅರ್ಜುನ್ ಕೂಡ ಗುಡ್ಡ ಕುಸಿತದಲ್ಲಿ ಮೃತಪಟ್ಟಿದ್ದರು.