ಶಿರಿಯಾರ ನಂದಿಕೇಶ್ವರ ಪೆಟ್ರೋ ಪ್ಲಾಜ: ಗ್ರಾಹಕರಿಗೆ ಲಕ್ಷ್ಮಣ ಫಲ ಸಸಿ ನೀಡುವ ಅಭಿಯಾನ
Views: 147
ಕನ್ನಡ ಕರಾವಳಿ ಸುದ್ದಿ: ನಂದಿಕೇಶ್ವರ ಪೆಟ್ರೋ ಪ್ಲಾಜ ಎತ್ತಿನಟ್ಟೆ ಶಿರಿಯಾರ ಇವರಿಂದ ಪ್ರಕೃತಿ ಕಡೆಗೆ ನಮ್ಮ ನಡೆ ಎನ್ನುವ ಆಶಯದೊಂದಿಗೆ ಸೆ.28ರಂದು ಗ್ರಾಹಕರಿಗೆ ಉಚಿತ ಲಕ್ಷ್ಮಣ ಫಲ ಸಸಿ ವಿತರಿಸಲಾಯಿತು,
ಹಸಿರು ಶಿರಿಯಾರ ಬಿತ್ತಿ ಬೆಳೆದು ಊರಿಗೆ ಸಿರಿಯಾಗೋಣ ಎಂಬ ಆಶಯದಂತೆ ಶಿರಿಯಾರ ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಪ್ರದೀಪ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು.
ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಧೀಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಹೊಸ ಬದುಕು ಆಶ್ರಮ ಇದರ ಅಧ್ಯಕ್ಷ ವಿನಯ್ ಚಂದ್ರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಂಗಳೂರು ಮಾರಾಟ ಅಧಿಕಾರಿ ಅಭಿಷೇಕ್, ಪ್ರದೀಪ್ ಕುಮಾರ್ ಶೆಟ್ಟಿ ಕೊಳ್ಕೆಬೈಲ್ ವಕೀಲರು ಕುಂದಾಪುರ, ಶಿರಿಯಾರದ ಗ್ರಾಮ್ ಪಂಚಾಯತ್ ಪಿಡಿಒ ದಿನೇಶ್ ಶೆಟ್ಟಿ, ಶಿರಿಯಾರ ಶ್ರೀ ನಂದಿಕೇಶ್ವರ ಪೆಟ್ರೋ ಪ್ಲಾಜ ಇದರ ಪ್ರವರ್ತಕರು ಕಾರ್ತಿಕ್ ರಾಜ್ ಸಾಸ್ತಾನ ಉಪಸ್ಥಿತರಿದ್ದರು. ಕೃಷ್ಣ ಸಾಸ್ತಾನ ಪ್ರಾರ್ಥಿಸಿದರು. ಅಣ್ಣಪ್ಪ ಸಾಸ್ತಾನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.









