ವೇಶ್ಯಾವಾಟಿಕೆಯಿಂದ ಹುಡುಗ- ಹುಡುಗಿಯರಿಗೆ ಮದುವೆಯಾಗಲು ಯಾರೂ ಬರುತ್ತಿಲ್ಲ: ಎಸ್ ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ

Views: 349
ಕನ್ನಡ ಕರಾವಳಿ ಸುದ್ದಿ;ಮಹಿಳೆಯರು ಬಹಿರಂಗವಾಗಿ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಮಹಿಳೆಯರು ಮತ್ತು ಪುರುಷರು ಭಾರಿ ಸಂಖ್ಯೆಯಲ್ಲಿ ಸೋಮವಾರ ರಾತ್ರೋರಾತ್ರಿ ಎಸ್ಪಿ ಕಚೇರಿಗೆ ತೆರಳಿ ದಿಢೀರ್ ಅಂತಾ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ ಇದೇ ವೇಳೆ ಲಿಖಿತ ದೂರು ಸಲ್ಲಿಸಿದ್ದಾರೆ.
ಗ್ರಾಮದ ವಾತಾವರಣ ಹದಗೆಟ್ಟಿದೆ. ನಾವು ತೀವ್ರ ತೊಂದರೆಗೊಳಗಾಗಿದ್ದೇವೆ ಎಂದು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಗ್ರಾಮಸ್ಥರ ಆಗ್ರಹ ಏನು?
ಹೊರಗಿನ ಯುವಕರು ಪ್ರತಿದಿನ ಗ್ರಾಮಕ್ಕೆ ಬಂದು ಹೋಗುತ್ತಲೇ ಇದ್ದಾರೆ. ಈ ವಿಷಯದ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಹಲವಾರು ಬಾರಿ ದೂರು ನೀಡಲಾಗಿದೆ. ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿರುವವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್ ಪಿ ಕಚೇರಿಗೆ ನೀಡಿದ ದೂರಿನಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವೇಶ್ಯಾವಾಟಿಕೆ ಸಮಸ್ಯೆಯಿಂದ ಗ್ರಾಮದ ಹುಡುಗ- ಹುಡುಗಿಯರಿಗೆ ಕೂಡಿ ಬರುತ್ತಿಲ್ಲ ಕಂಕಣ ಭಾಗ್ಯ: ಗ್ರಾಮದಲ್ಲಿ ನಡೆಯುತ್ತಿರುವ ಈ ಅಕ್ರಮ ವ್ಯವಹಾರ ಮತ್ತು ವೇಶ್ಯಾವಾಟಿಕೆಯಿಂದಾಗಿ ಇಲ್ಲಿನ ಹುಡುಗರನ್ನು ಮತ್ತು ಹುಡುಗಿಯರು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದರಿಂದಾಗಿ ಗ್ರಾಮದ ಜನರು ಅಸಮಾಧಾನಗೊಂಡಿದ್ದಾರೆ. ಹೀಗಾಗಿಯೇ ಆಕ್ರೋಶಿತರಾಗಿ ಎಸ್ ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಡಿಎಸ್ಪಿ ಅವರನ್ನು ಗ್ರಾಮಸ್ಥರು ಒಕ್ಕೋರಲಿನಿಂದ ಆಗ್ರಹಿಸಿದ್ದಾರೆ.