ಯುವಜನ

ಕುಂದಾಪುರ:ವಾಶ್ ರೂಂಗೆ ಹೋಗಿ ಬರುವುದಾಗಿ ಹೇಳಿ ಹೋದವಳು ನಾಪತ್ತೆ, ಯುವತಿಯ ಪತ್ತೆಗಾಗಿ ಮನವಿ

Views: 0

ಕನ್ನಡ ಕರಾವಳಿ ಸುದ್ದಿ: ಉಡುಪಿಯ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ವಿದ್ಯಾರ್ಥಿನಿ ಈಶ್ವರಿ(18) ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದು, ವಾಶ್ ರೂಂಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ಸು ಬರದೇ ನಾಪತ್ತೆಯಾದ ಪ್ರಕರಣ ನಡೆದಿದೆ. ಪೋಷಕರು ಯುವತಿಯ ಪತ್ತೆಗಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪತ್ತೆಗಾಗಿ ಮನವಿ ಮಾಡಿಕೊಂಡಿದ್ದಾರೆ.

ಈಶ್ವರಿ ದಿನಾಂಕ 24-08-2026 ರಂದು ಮಂಗಳೂರಿನ ಕೂಳೂರು ಎಂಬಲ್ಲಿಗೆ ಕೆಲಸಕ್ಕೆ ಸೇರಿಕೊಂಡಿದ್ದು, ಈ ವಿಚಾರ ತಿಳಿದು ಪೋಷಕರು ದಿನಾಂಕ 25-08-2026 ರಂದು ಕೂಳೂರಿನಿಂದ ಕರೆದುಕೊಂಡು ಕುಕ್ಕಿಕಟ್ಟೆಗೆ ಬಂದಿರುತ್ತಾರೆ ನಂತರ ಪಿರ್ಯಾದಿದಾರರ ಮಗಳು ಮೊಬೈಲ್ ಪೋನ್ ನನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಊರಿನಲ್ಲಿ ಬಿಟ್ಟರೆ ಸರಿಯಾಗಬಹುದೆಂದು ತಿಳಿದು ಪಿರ್ಯಾದಿದಾರರು ಮತ್ತು ಅವರ ಮಗಳು ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ರಾತ್ರಿ 10:30 ಗಂಟೆಗೆ ಬಂದಿದ್ದು ಆ ಸಮಯ ಮಗಳು ವಾಶ್ ರೂಂಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ಸು ಬಂದಿರುವುದಿಲ್ಲ, ಅವರ ಸಂಬಂಧಿಕರಲ್ಲಿ, ಮನೆಯವರಲ್ಲಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗದೇ ಇದ್ದ ಕಾರಣ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕಾಣೆಯಾದ ಈಶ್ವರಿ ಅವರನ್ನು ಪತ್ತೆ ಮಾಡಿಕೋಡಬೇಕಾಗಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಾಣೆಯಾದ ಯುವತಿ ಪತ್ತೆಯಾದಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.

ಕಾಣೆಯಾದವರ ಹೆಸರು ಈಶ್ವರಿ(18) ತಂದೆ ಹೆಸರು ಶೇಖರ್, ಎತ್ತರ 4.5, ಧರಿಸಿದ ಬಟ್ಟೆ  ಪಿಂಕ್ ಬಣ್ಣದ ಚೂಡಿದಾರ ಅದರ ಮೇಲೆ ನೀಲಿ ಬಣ್ಯದ ಜಾಕೇಟ್ ಧರಿಸಿರುತ್ತಾರೆ. ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ, ಎಣ್ಣೆ ಕಪ್ಪು ಮೈ ಬಣ್ಣ ಈ ಮೇಲ್ಕಂಡ ವ್ಯಕ್ತಿಯು ಪತ್ತೆಯಾದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:

ಕುಂದಾಪುರ ಪೊಲೀಸ್ ಠಾಣೆ: 08254-230338

ಡಿ.ವೈ.ಎಸ್.ಪಿ ಕುಂದಾಪುರ ವಿಭಾಗ:9480805422

 ಪಿ. ಐ ಕುಂದಾಪುರ ಠಾಣೆ: 9480805455/8277988957

 ಪಿ.ಎಸ್. ಐ ಕುಂದಾಪುರ ಠಾಣೆ: 8277988959

Related Articles

Back to top button
error: Content is protected !!