ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ; 9ನೇ ವಿಶೇಷ ಯೋಗ ಶಿಬಿರ

Views: 1
ಕೋಟೇಶ್ವರ: ಓಂ ಯೋಗ ವಿದ್ಯಾ ಮಂದಿರ ಮತ್ತು ರೋಟರಿ ಕ್ಲಬ್ ಕೋಟೇಶ್ವರ, ಗ್ರಾಮ ವಿಕಾಸ ಸಮಿತಿ ಮತ್ತು ಶ್ರೀ ನೀರೇ ಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ (ರಿ). ಇವರ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ವಿಶೇಷ ಯೋಗ ಶಿಬಿರವನ್ನು ಕೋಟೇಶ್ವರ ಮಿತ್ರ ಕ್ಲಿನಿಕ್ ನ ಡಾ. ರಾಜೇಶ್ ಕುಮಾರ್ ಶೆಟ್ಟಿ ಶಿಬಿರ ಉದ್ಘಾಟಿಸಿ, ಮಾತನಾಡಿ, ದೈಹಿಕ ವ್ಯಾಯಾಮ ಮತ್ತು ಆಸನಗಳಿಂದ ಮುಂದುವರಿದು ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಿಸಿ, ಜ್ಞಾನ ಸಂಪಾದನೆಗೆ ಯೋಗ ಮುಖ್ಯ ಎಂದರು.
ಕೋಟೇಶ್ವರ ರೋಟರಿ ಕ್ಲಬ್ ಭಾವಿ ಅಧ್ಯಕ್ಷ ಜಗದೀಶ್ ಮೊಗವೀರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಚಂದ್ರಶೇಖರ್ ಶೆಟ್ಟಿ ಇದ್ದರು.
ಮಾ.ಧನ್ವಿ ಪ್ರಸಾದ್ ,ಮಾ.ಸಾದ್ವಿ ಪ್ರಸಾದ್ ಪ್ರಾರ್ಥಿಸಿದರು. ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಮಚಂದ್ರ ಗಾಣಿಗ ವಂದಿಸಿದರು.ಓಂ ಯೋಗ ವಿದ್ಯಾಮಂದಿರದ ಅಣ್ಣಪ್ಪ ಶೆಟ್ಟಿಗಾರ್ ಯೋಗ ತರಬೇತಿ ನಡೆಸಿಕೊಟ್ಟರು
ಪ್ರತಿದಿನ ಬೆಳಿಗ್ಗೆ 5:30 ರಿಂದ ಮತ್ತು ಸಂಜೆ 5:30 ರಿಂದ ನಡೆಯಲಿರುವ ಯೋಗ ಶಿಬಿರದ ತರಬೇತುದಾರ ಶ್ರೀ ಅಣ್ಣಪ್ಪ ಹಾಗೂ ಶ್ರೀಮತಿ ಗೀತಾ ಅವರು ಒಂದು ವಾರಗಳ ಕಾಲ ನಡೆಯಲಿರುವ ವಿಶೇಷ ಯೋಗ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯುವಂತೆ ವಿನಂತಿಸಿದರು.