ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Views: 30
ಕುಂದಾಪುರ ಕನ್ನಡ ‘ಭಾಷಿ ಅಲ್ಲ ಬದ್ಕ್’ ಎಂಬ ಘೋಷ ವಾಕ್ಯದೊಂದಿಗೆ ಇಲ್ಲಿನ ಜನರ ಭಾಷಾ ಪ್ರೀತಿಯನ್ನು ಪಸರಿಸುವ ನಿಟ್ಟಿನಲ್ಲಿ ಹೊಸ ತಲೆಮಾರಿಗೂ ಭಾಷೆ ಉಳಿಸಲು ಕುಂದ ಕನ್ನಡಿಗರಿಂದ ಜುಲೈ 16 ಮತ್ತು17 ರಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ನಡೆಯಲಿದೆ.
ಪಂಚ ನದಿಗಳ ಸಂಗಮ ಕುಂದಾಪುರ, ಕುಂದವರ್ಮ ನೆಂಬ ಅರಸ ಪಂಚ ಗಂಗಾವಳಿ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿದ್ದರಿಂದ ‘ಕುಂದಾಪುರ ‘ಎಂಬ ಹೆಸರು ಬಂದಿದೆ.
ನಾಟಕ,ಯಕ್ಷಗಾನ,ಸಾಹಿತ್ಯ,ಶಿಕ್ಷಣ, ಹೀಗೆ ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕಂಗೊಳಿಸುತ್ತಿರುವ ಕುಂದಾಪುರ ಆಡು ಭಾಷೆ ‘ಕುಂದಾಪ್ರ ಕನ್ನಡ’ ಆಷಾಡ ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆ ಎಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಸಂಗಮ.
ಉತ್ತರಕ್ಕೆ ಬೈಂದೂರು-ಶಿರೂರಿನಿಂದ ಮಾಬುಕಳದವರೆಗೆ, ಪಕ್ಷಿಮಕ್ಕೆ ಕಲ್ಯಾಣಪುರ ನದಿ, ದಕ್ಷಿಣಕ್ಕೆ ಹೆಬ್ರಿ, ಮೂಡಣ ಪರ್ವತ ಹಾಗೂ ಪಡುವಿನ ಕಡಲ ತಡಿಯುವವರೆಗಿನ ಊರುಗಳಲ್ಲಿ ಉಪ ಭಾಷೆಯದ ಕುಂದಾಪುರ ಕನ್ನಡ ಮಾತನಾಡುವ ಜನರಿದ್ದಾರೆ.
ಜುಲೈ 16 ರಂದು ವಿಶ್ವಕರ್ಮ ಸಮಾಜ ತಲ್ಲೂರು ಇವರ ಆಶ್ರಯದಲ್ಲಿ ಆಷಾಡ ಸಂಭ್ರಮ ತಲ್ಲೂರಿನ ಶೇಷ ಕೃಷ್ಣ ಹಾಲ್ ನಲ್ಲಿ ನಡೆಯಲಿದೆ. ಮನು ಹಂದಾಡಿ ಅವರಿಂದ ನಗೆ ಹಬ್ಬ, ನೃತ್ಯ ,ಸಂಗೀತ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸೊರೆಮುಕ್ಕಿಯಲ್ಲಿ ಯಕ್ಷಿ ಬಳಗದ ವತಿಯಿಂದ ಗಡ್ಜ್, ಗಮ್ಮತ್ತ್, ಕೇಸರ್, ಪಂತ, ಹಾಡು, ಊಟ, ಕುಣಿತ ಕಾರ್ಯಕ್ರಮ.
ಶಂಕರನಾರಾಯಣದ ಕಲ್ಲುಂಜೆ ಸಮೃದ್ಧಿ ಯುವಕ ಮಂಡಲ ಆಶ್ರಯದಲ್ಲಿ ಕೆಸರು ಗದ್ದೆ ಓಟ, ವಾಲಿಬಾಲ್, ಕ್ರಿಕೆಟ್, ಮೊಸರು ಕುಡಿಕೆ, ಹಗ್ಗ ಜಗ್ಗಾಟ ನಡೆಯಲಿದೆ.
ಜುಲೈ 17 ರಿಂದ ಸಂಜೆ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ವಿವಿಧ ಸಂಘಗಳ ಆಶಯದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ನಡೆಯಲಿದೆ.
ಸಿದ್ದಾಪುರದಲ್ಲಿ ಸಾಧಕರಿಗೆ ಸನ್ಮಾನ, ಗಾದೆಗಳ ಪ್ರಾತ್ಯಕ್ಷಿಕೆ, ಜೋಗುಳದ ಹಾಡು, ಹಳೆಯ ದಿನಗಳನ್ನು ನೆನಪಿಸುವ ಕಾರ್ಯಕ್ರಮ ನಡೆಯಲಿದೆ.