ಸಾಂಸ್ಕೃತಿಕ

ವಿಚ್ಛೇದನ ನೀಡಿದ್ದಕ್ಕೆ ಗಂಡನಿಗೆ ಜೀವನಾಂಶ ನೀಡಿ ಸುದ್ದಿಯಾದ ಕಿರುತೆರೆ ನಟಿ!

Views: 150

ಕನ್ನಡ ಕರಾವಳಿ ಸುದ್ದಿ: ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ವಿಚ್ಛೇದನದಲ್ಲಿ ಪತಿಗೆ ಜೀವನಾಂಶ ನೀಡಿ ಸುದ್ದಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಅನ್ನೋದು ಟ್ರೆಂಡ್‌ ಆಗಿದೆ. ಸಾಮಾನ್ಯವಾಗಿ ವಿವಾಹ ವಿಚ್ಛೇದನಗಳ ಪೈಕಿ ಪುರುಷರಿಂದ ಮಹಿಳೆ ಪಡೆಯುವ ಜೀವನಾಂಶದ ಬಗ್ಗೆಯೇ ಚರ್ಚೆ ಆಗುತ್ತದೆ.ಆದರೆ, ಕಿರುತೆರೆ ನಟಿಯೊಬ್ಬರು ವಿಚ್ಛೇದನವಾದಾಗ ಪತಿಗೆ ಜೀವನಾಂಶ ನೀಡಿ ಸುದ್ದಿಯಾಗಿದ್ದರು. ಆಕೆ ಬೇರಾರೂ ಅಲ್ಲ ಶ್ವೇತಾ ತಿವಾರಿ. 44 ವರ್ಷವಾದರೂ ಬಳುಕುವ ಬಳ್ಳಿಯಂತಿರುವ ಶ್ವೇತಾ ಬಾಳಿನಲ್ಲಿ ಇಬ್ಬರು ಪುರುಷರು ಬಂದಿದ್ದಾರೆ. 1998 ರಿಂದ 2007ರವರೆಗೆ ಆಕೆ ಟಿವಿ ನಟ ರಾಜಾ ಚೌಧರಿಯನ್ನು ವಿವಾಹವಾಗಿದ್ದರು. ಈ ಮದುವೆಯಿಂದ ಅವರಿಗೆ ಪಲಕ್‌ ತಿವಾರಿ ಅನ್ನೋ ಮಗಳು ಜನಿಸಿದ್ದಳು.

ಮೊದಲ ವಿಚ್ಛೇದನದ ನಂತರ, ಶ್ವೇತಾ ತಿವಾರಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ವಿವಾಹವಾದರು. ಆದರೆ ನಟಿಯ ಎರಡನೇ ಮದುವೆಯೂ ಹೆಚ್ಚು ಕಾಲ ಉಳಿಯಲಿಲ್ಲ. ಅಭಿನವ್ ಕೊಹ್ಲಿ ಮತ್ತು ಶ್ವೇತಾ ತಿವಾರಿ ದಂಪತಿಗೆ ಒಬ್ಬ ಮಗನಿದ್ದಾನೆ. ಸದ್ಯ ನಟಿ ಒಂಟಿಯಾಗಿ ಮಕ್ಕಳ ಜೊತೆ ಸಂತೋಷದ ಜೀವನ ಸಾಗಿಸುತ್ತಿದ್ದಾರೆ.2007ರಲ್ಲಿ ರಾಜಾ ಚೌಧರಿಯಿಂದ ಬೇರ್ಪಟ್ಟ ಶ್ವೇತಾ ತಿವಾರಿಗೆ ಐದು ವರ್ಷಗಳ ಹೋರಾಟ ಬಳಿಕ 2012ರಲ್ಲಿ ವಿಚ್ಛೇದನ ಸಿಕ್ಕಿತ್ತು.

ಈ ವೇಳೆ ಜೀವನಾಂಶದ ಬಗ್ಗೆಯೂ ಭಾರೀ ಚರ್ಚೆಯಾಗಿತ್ತು. ಮದುವೆ ಆಗಿದ್ದ ಸಮಯದಲ್ಲಿ ಇಬ್ಬರೂ ಸೇರಿ ಮಲಾಡ್‌ನಲ್ಲಿ ಸಿಂಗಲ್‌ ಬೆಡ್‌ರೂಮ್‌ ಅಪಾರ್ಟ್‌ಮೆಂಟ್‌ಅನ್ನು ಖರೀದಿ ಮಾಡಿದ್ದರು.ಪತಿಗೆ ಜೀವನಾಂಶದ ಭಾಗವಾಗಿ  ಅಪಾರ್ಟ್‌ಮೆಂಟ್‌ಅನ್ನು ರಾಜಾ ಚೌಧರಿಗೆ ನೀಡಿದ್ದರು.

Related Articles

Back to top button