ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರರಿಂದ 38ನೇ ಗುರುವಂದನಾ ಕಾರ್ಯಕ್ರಮ
ಬಸವರಾಜ್ ಶೆಟ್ಟಿಗಾರರವರು ತಮ್ಮ ಜನ್ಮದಿನೋತ್ಸವದಂದು ಗುರುಗಳನ್ನು ಸನ್ಮಾನಿಸಿ ಗೌರವಿಸಿರುವುದು ಇತ್ತೀಚಿನ ಯುವಜನಾಂಗಕ್ಕೆ ಒಂದು ಮಾರ್ಗದರ್ಶಿ ಕಾರ್ಯಕ್ರಮ----ಅಥಣಿ ಮಠದ ಶ್ರೀ ಶ್ರೀ ಪ್ರಭು ಚನ್ನಬಸವ ಮಹಾ ಸ್ವಾಮೀಜಿ
Views: 64
ಕನ್ನಡ ಕರಾವಳಿ ಸುದ್ದಿ :ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರರ 58ನೇ ಜನ್ಮದಿನೋತ್ಸವದ ಪ್ರಯುಕ್ತ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಮಠದ ಶ್ರೀ ಶ್ರೀ ಶ್ರೀ ಪ್ರಭು ಚನ್ನಬಸವ ಮಹಾ ಸ್ವಾಮಿಯವರಿಗೆ 38ನೇ ಗುರುವಂದನಾ ಕಾರ್ಯಕ್ರಮವನ್ನು ಮಾಡಿದರು.

ಪೂಜ್ಯರು ಮಾತನಾಡುತ್ತಾ, ಬಸವರಾಜ್ ಶೆಟ್ಟಿಗಾರರವರು ತಮ್ಮ ಜನ್ಮದಿನೋತ್ಸವದಂದು ಗುರುಗಳನ್ನು ಸನ್ಮಾನಿಸಿ ಗೌರವಿಸಿರುವುದು ಇತ್ತೀಚಿನ ಯುವಜನಾಂಗಕ್ಕೆ ಒಂದು ಮಾರ್ಗದರ್ಶಿ ಕಾರ್ಯಕ್ರಮವಾಗಿದೆ ಎಂದು ಶುಭ ಹಾರೈಸಿ ಸ್ವಾಮೀಜಿಯವರು ಬಸವರಾಜ್ ಶೆಟ್ಟಿಗಾರರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಗುರುವಂದನಾ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತರಾದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಾ. ಎಂ. ಸಂತೋಷ್ ಹೆಗ್ಡೆ, ಹಿರಿಯ ಸಾಹಿತಿಗಳಾದ ಡಾ. ಸಿ. ಸೋಮಶೇಖರ್, ಚಿತ್ರನಟರಾದ ಶಂಕರ್ ಭಟ್, ಗಣೇಶ್ ರಾವ್, ಶ್ರೀಮತಿ ಮೀನಾ, ಪತ್ರಕರ್ತರಾದ ರಮೇಶ್ ಎಸ್, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ಜಿ. ನಂಜುಡಯ್ಯಮಠ, ಪ್ರತಿಷ್ಠಾನದ ಸಂಚಾಲಕ ಎಂ.ಸಿ.ಕೃಷ್ಣ, ಸವಿತಾ ಸಮಾಜದ ಅಧ್ಯಕ್ಷರಾದ ಡಾ.ಎಂ.ಎಸ್. ಮುತ್ತುರಾಜ್ ಉಪಸ್ಥಿತರಿದ್ದು ಶುಭ ಹಾರೈಸಿದರು.






