ಸಾಂಸ್ಕೃತಿಕ

ವಕ್ವಾಡಿ ಫ್ರೆಂಡ್ಸ್ (ರಿ) ವಕ್ವಾಡಿ :ಉಚಿತ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

Views: 130

ಕುಂದಾಪುರ:ವಕ್ವಾಡಿ ಫ್ರೆಂಡ್ಸ್ (ರಿ) ವಕ್ವಾಡಿ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು.

ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಸದಾನಂದ ಶೆಟ್ಟಿ ಉದ್ಘಾಟಿಸಿ ವಕ್ವಾಡಿ ಫ್ರೆಂಡ್ಸ್ ನವರ ಈ ಒಂದು ಕಾರ್ಯವು ಅವರ ತಂಡಕ್ಕೆ ಒಂದು ಹೆಮ್ಮೆಯ ಗರಿ ಸೇರಿಕೊಂಡಿದೆ. ಸಮಾನ ಮನಸ್ಕರ ತಂಡವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ತಂಡವನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಮಕ್ಕಳಿಗೆ ಉತ್ತಮವಾದ ವೇದಿಕೆಯನ್ನು ನೀಡಿ ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕಾರಿಯಾಗಿದೆ ಇಂತಹ ಅತ್ಯುತ್ತಮ ಕಾರ್ಯಗಳು ವಕ್ವಾಡಿ ಫ್ರೆಂಡ್ಸ್ ತಂಡದವರಿಂದ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಶ್ರೀ ಸುಧೀರ್ ಶೆಟ್ಟಿ ಅವರು ಮಕ್ಕಳು ದೇಶದ ಆಸ್ತಿ. ವಕ್ವಾಡಿ ಫ್ರೆಂಡ್ಸ್ ನವರ ಈ ಒಂದು ಕಾರ್ಯ ಪ್ರಶಂಸನೀಯ ಒಂದಲ್ಲ ಒಂದು ಉತ್ತಮ ಕಾರ್ಯಕ್ರಮ ಆಯೋಜಿಸಿ ಉಡುಪಿ ಜಿಲ್ಲೆಯಲ್ಲಿ ಹೆಸರು ಮಾಡಿದ ಸಂಸ್ಥೆ ಎಂದರೆ ತಪ್ಪಾಗಲಾರದು. ಮಕ್ಕಳು ರಜೆಯ ಸಮಯದಲ್ಲಿ ಮೊಬೈಲ್. ಟಿ ವಿ ಯಲ್ಲಿ  ಹೆಚ್ಚಿನ ಸಮಯ ತೊಡಗದೆ ಇಂತಹ ಶಿಬಿರದಲ್ಲಿ ಭಾಗವಹಿಸಿ ಜ್ಞಾನರ್ಜನೆಗೆ ಸಹಾಯಕವಾಗಿದೆ ಎಂದರು.

ನಾಲ್ಕು ತಂಡದ ಶಿಬಿರಾರ್ಥಿಗಳು 6 ದಿನದ ಅನಿಸಿಕೆಗಳನ್ನು ಹಂಚಿಕೊಂಡರು.ವೇದಿಕೆಯಲ್ಲಿ ವಕ್ವಾಡಿ ಫ್ರೆಂಡ್ಸ್ ನ ಅಧ್ಯಕ್ಷರಾದ ಶ್ರೀ ಕಿರಣ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ವನಿತಾ ಆಚಾರ್ಯ ಹಾಗೂ ನಾಲ್ಕು ತಂಡದ ಉಪಸ್ಥಿತರಿದ್ದರು. ಪೋಷಕರಿಂದ ಉತ್ತಮ ಅಭಿಪ್ರಾಯ ಹಂಚಿಕೊಂಡರು. ಶಿಬಿರಾರ್ಥಿ ಕುಮಾರಿ. ಚಾರಿತ್ರ್ಯ , ಕು. ಅಭಿಜಿತ್ ಕಾರ್ಯಕ್ರಮ ನಿರೂಪಿಸಿ, ಕು. ನಿರೀಕ್ಷಾ ಆಚಾರ್ಯ ಸ್ವಾಗತಿಸಿ ವಕ್ವಾಡಿ ಸಂಸ್ಥೆಯ ಶ್ರೀ ಕೀರ್ತಿ ಶೆಟ್ಟಿ ಅವರು ವಕ್ವಾಡಿ ಸಂಸ್ಥೆ ನಡೆದು ಬಂದ ಹಾದಿ ಬಗ್ಗೆ ಮಾತನಾಡಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಬರಲಿದೆ ಎಂದರು.

ಶಿಬಿರ ನಿರ್ದೇಶಕರಾದ ಕುಮಾರ್ ಜಿ ಸಾಲಿಗ್ರಾಮ ಪ್ರಸ್ತಾವನೆಗೈದರು.
ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಕು. ಪೂರ್ವಿ, ಕು.ಆದಿತ್ಯ ನೆರವೇರಿಸಿದರು.

Related Articles

Back to top button
error: Content is protected !!