ರಾಜಕೀಯ
ವಕ್ವಾಡಿಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಜಾಗೃತಿ ಅಭಿಯಾನ

Views: 0
ಕುಂದಾಪುರ: ಲೋಕಸಭಾ ಸಾರ್ವತಿಕ ಚುನಾವಣೆ- 2024 ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಅಭಿಯಾನ ವಕ್ವಾಡಿ ಪಂಚಾಯತ್ ವಠಾರದಲ್ಲಿ ಡಿ.6ರಂದು ಬೆಳಿಗ್ಗೆ ನಡೆಯಿತು.
ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರಿಗೆ ಮತ ಯಂತ್ರಗಳ ಮೂಲಕ ಮತದಾನ ಮಾಡುವುದು ಹೇಗೆ? ಎಂಬ ಅರಿವು ಕಾರ್ಯಕ್ರಮವನ್ನು ವಿದ್ಯುನ್ಮಾನ ಮತಯಂತ್ರದ ಮೂಲಕ ಸೆಕ್ಟರ್ ಆಫೀಸರ್ ರಮೇಶ್ ಅವರು ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಾಮ ಲೆಕ್ಕಾಧಿಕಾರಿ ಅಫ್ರೋಜ್ ಎಸ್ಎ, ಗ್ರಾಮ ಸಹಾಯಕ ಕೃಷ್ಣ, ಬಿಎಲ್ಒ ಅಧಿಕಾರಿಗಳಾದ ಯಶೋಧ ಶೆಟ್ಟಿ, ಶೋಭಾ, ಶ್ಯಾಮಲಾ ಇದ್ದರು.
ಶಂಕರ್ ಕುಲಾಲ್ ,ಮಂಜುನಾಥ್ ಮತ್ತು ಸಮಸ್ತ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.ಮತದಾರರ ಹಲವು ಸಮಸ್ಯೆಗಳಿಗೆ ಈ ಮೂಲಕ ಬಗೆಹರಿಸಲಾಯಿತು.






