ಲೋಕಸಭಾ ಚುನಾವಣೆಗೆ ಶಿವರಾಜ್ ಕುಮಾರ್ ಗೆ ಓಪನ್ ಟಿಕೆಟ್ ಆಫರ್ ನೀಡಿದ ಡಿಕೆಶಿ

Views: 1
ಬೆಂಗಳೂರು: ಕರ್ನಾಟಕ ರಾಜ್ಯ ಆರ್ಯ ಈಡಿಗ ಸಂಘ ಅರಮನೆ ಮೈದಾನದಲ್ಲಿ ಅಮೃತ ಮಹೋತ್ಸವ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಆಯೋಜಿಸಿತ್ತು. ಬ್ರಹ್ಮಶ್ರೀ ನಾರಾಯಣಗುರು ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಚಿವರಾದ ಮಧು ಬಂಗಾರಪ್ಪ, ಶಿವರಾಜ್ ತಂಗಡಗಿ ಸೇರಿದಂತೆ ನಟರಾದ ಶಿವರಾಜ್ ಕುಮಾರ್, ಸಾಧುಕೋಕಿಲ, ಶ್ರೀಮುರುಳಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಆರ್ಯ ಈಡಿಗ ಸಂಘದ ಬೃಹತ್ ಜಾಗೃತ ಸಮಾವೇಶದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಟ ಶಿವರಾಜ್ ಕುಮಾರ್ ಅವರಿಗೆ ಓಪನ್ ಆಫರ್ ಕೊಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ನೀನು ರೆಡಿ ಆಗಪ್ಪ. ಸಿನಿಮಾಗಳನ್ನು ಯಾವಾಗ ಬೇಕಾದರೂ ಮಾಡಬಹುದು. ಎಲ್ಲರಿಗೂ ಸಂಸದನಾಗಲು ಸಾಧ್ಯವಿಲ್ಲ. ಭಾಗ್ಯ ತಮ್ಮ ಮನೆಗೆ ಬಂದಿದೆ ಎಂದು ಚುನಾವಣಾ ರಾಜಕೀಯಕ್ಕೆ ಎಂಟ್ರಿ ಆಗುವ ಆಫರ್ ಕೊಟ್ಟಿದ್ದಾರೆ. ಈ ಮೂಲಕ ಈ ಬಾರಿ ಚುನಾವಣೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಕೊಟ್ಟ ಟಿಕೆಟ್ ಆಫರ್ ಅನ್ನು ನಟ ಶಿವರಾಜ್ ಕುಮಾರ್ ಅವರು ನಯವಾಗಿ ತಿರಸ್ಕರಿಸಿದ್ದಾರೆ. ನಮ್ಮ ತಂದೆ ಕೊಟ್ಟ ಬಳುವಳಿ ಬಣ್ಣ ಹಚ್ಚೋದು ಮಾತ್ರ. ಗೀತಾ ಶಿವರಾಜ್‌ಕುಮಾರ್ ನಿಲ್ತಾರೆ. ಹೆಂಡತಿ ಇಷ್ಟ ಪಟ್ಟಾಗ ಈಡೇರಿಸೋದು ಗಂಡನ ಕರ್ತವ್ಯ.ಎಂದರು.






