ಇತರೆ

ಲಯನ್ಸ್ ಕ್ಲಬ್ ಬನ್ನಾಡಿ–ವಡ್ಡರ್ಸೆಗೆ ರೀಜನ್ ಚೆಯರ್ ಪರ್ಸನ್ ಲಯನ್ ಎಮ್.ಜೆ.ಎಫ್ ರಜತ್ ಹೆಗ್ಡೆ ಭೇಟಿ

Views: 17

ಕನ್ನಡ ಕರಾವಳಿ ಸುದ್ದಿ: ರೀಜನ್ V ರ ರೀಜನ್ ಚೆಯರ್ ಪರ್ಸನ್ ಲಯನ್ ಎಮ್.ಜೆ.ಎಫ್ ರಜತ್ ಹೆಗ್ಡೆಯವರು ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಗೆ ಭೇಟಿ ನೀಡಿದರು.

ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮಕ್ಕೆ, ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಅಧ್ಯಕ್ಷರಾದ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಲಯನ್ ಚಂದ್ರ ಶೆಟ್ಟಿ ಯಾಳಹಕ್ಲು & ಕೋಶಾಧಿಕಾರಿ ಲಯನ್ ನಿತೀಶ್ ಆಚಾರ್ ಮಧುವನ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು. 

ಲಯನ್ ಎಮ್.ಜೆ.ಎಫ್ ಬನ್ನಾಡಿ ಪ್ರಭಾಕರ ಶೆಟ್ಟಿಯವರ ಪ್ರಾರ್ಥನೆಯ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ಚಂದ್ರ ಶೆಟ್ಟಿ ಯಾಳಹಕ್ಲು, ಲಯನ್ಸ್ ಕ್ಲಬ್ ನ ಸೇವಾ ಚಟುವಟಿಕೆಯ ವರದಿಯನ್ನು ವಾಚಿಸಿದರು. 

ನಿಕಟಪೂರ್ವ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ ಫ್ಲ್ಯಾಗ್ ಸೆಲ್ಯೂಟೇಶನ್ ಹಾಗೂ ಮಾಜಿ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಕೊಮೆ ಲಯನ್ ಕೋಡ್ ಆಫ್ ಕಂಡಕ್ಟ್ ಓದಿದರು.

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸ್ಥಾಪಕಾಧ್ಯಕ್ಷರಾದ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆಯವರು ರೀಜನ್ ಚೆಯರ್ ಪರ್ಸನ್, ಲಯನ್ ಎಮ್.ಜೆ.ಎಫ್ ರಜತ್ ಹೆಗ್ಡೆ ಯವರ ಪರಿಚಯ ಮಾಡಿದರು. 

ರೀಜನ್ ಚೆಯರ್ ಪರ್ಸನ್ ಲಯನ್ ಎಮ್.ಜೆ.ಎಫ್ ರಜತ್ ಹೆಗ್ಡೆ ಯವರು “ಕೇವಲ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ, ಉತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಲಯನ್ಸ್ ಜಿಲ್ಲೆಯಲ್ಲೇ ಅತ್ಯುತ್ತಮ ಕ್ಲಬ್ ಗಳಲ್ಲಿ ಒಂದಾಗಿ ಮೂಡಿ ಬಂದಿದೆ” ಎಂದರಲ್ಲದೇ, ಕ್ಲಬ್ ನ ಸೇವಾ ಚಟುವಟಿಕೆ, ಕಾರ್ಯ ವೈಖರಿಗಳನ್ನು ನೋಡಿ, ಕ್ಲಬ್ ನ ಸದಸ್ಯರ ಸಹಕಾರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ರೀಜನ್ ಸೆಕ್ರೆಟರಿ ಲಯನ್ ಎಮ್.ಜೆ.ಎಫ್ ಏಕನಾಥ ಬೋಳಾರ್ ಮತ್ತು ಝೋನ್ ಚೆಯರ್ ಪರ್ಸನ್ ಲಯನ್ ಸಂತೋಷ್ ಶೆಟ್ಟಿ ಬ್ರಹ್ಮಾವರ ಇವರು ಶುಭಾಶಂಸನೆ ಗೈದರು. 

ಈ ಸಂದರ್ಭ ವಡ್ಡರ್ಸೆ ರತ್ನಾಕರ ಶೆಟ್ಟಿ ಇವರನ್ನು ನೂತನ ಸದಸ್ಯರನ್ನಾಗಿ ಕ್ಲಬ್ ಗೆ ಸೇರ್ಪಡೆಗೊಳಿಸಲಾಯಿತು, ಮಾಜಿ ಅಧ್ಯಕ್ಷರಾದ ಲಯನ್ Adv. ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಅವರನ್ನು ಪರಿಚಯಿಸಿದರು ಹಾಗೂ ರೀಜನ್ ಚೆಯರ್ ಪರ್ಸನ್ ಲಯನ್ ಎಮ್.ಜೆ.ಎಫ್ ರಜತ್ ಹೆಗ್ಡೆಯವರು ಅವರಿಗೆ ಪ್ರತೀಜ್ಞಾವಿಧಿ ಭೋದಿಸಿದರು.

ಸಭಾಕಾರ್ಯಕ್ರಮದ ಸೇವಾ ಚಟುವಟಿಕೆ ಅಂಗವಾಗಿ ಲಯನ್ ಎಮ್.ಜೆ.ಎಫ್ ಬನ್ನಾಡಿ ಪ್ರಭಾಕರ ಶೆಟ್ಟಿಯವರು ಕೊಡಮಾಡಿದ ಫ್ಯಾನ್ ಅನ್ನು ಬನ್ನಾಡಿ ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು ಹಾಗೂ ಓರ್ವರಿಗೆ ವೈದ್ಯಕೀಯ ನೆರವು ನೀಡಲಾಯಿತು.    

ನವಂಬರ್ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕ್ಲಬ್ ನ ಸದಸ್ಯರುಗಳಾದ ಲಯನ್ Adv. ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಲಯನ್ ಬನ್ನಾಡಿ ಸಂತೋಷ್ ಶೆಟ್ಟಿ (ಟಿ.ಸಿ.ಬಿ) ಮತ್ತು ಲಯನ್ ವಡ್ಡರ್ಸೆ ನವೀನ್ ಶ್ಯಾನುಭಾಗ್ ರವರಿಗೆ ಕ್ಲಬ್ ನ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಯಿತು. 

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಅಧ್ಯಕ್ಷರಾದ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. 

ಲಯನ್ ಪ್ರೋ. ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ, ಲಯನ್ ಎಮ್.ಜೆ.ಎಫ್ ಬನ್ನಾಡಿ ಪ್ರಭಾಕರ ಶೆಟ್ಟಿ, ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ, ಲಯನ್ ಸುರೇಂದ್ರ ಶೆಟ್ಟಿ ಕೊಮೆ ಮತ್ತು ಲಯನ್ ಅಶ್ವಥ್ ಶೆಟ್ಟಿ ಮಧುವನ ಕಾರ್ಯಕ್ರಮದ ಹೋಸ್ಟ್ ಗಳಾಗಿದ್ದರು. 

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಕೋಶಾಧಿಕಾರಿ ಲಯನ್ ನಿತೀಶ್ ಆಚಾರ್ ಮಧುವನ ಇವರು ವಂದಿಸಿದರು.  

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೋ. ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ ಇವರು ಕಾರ್ಯಕ್ರಮ ನಿರೂಪಿಸಿದರು.

Related Articles

Back to top button
error: Content is protected !!