ಸಾಂಸ್ಕೃತಿಕ
ಲಕುಮಿ, ಯಾರೇ ನೀ ಮೋಹಿನಿ ಸೀರಿಯಲ್ ನಟಿ ಸುಷ್ಮಾ ಸದ್ದಿಲ್ಲದೇ ನಿಶ್ಚಿತಾರ್ಥ.. ಹುಡುಗ ಯಾರು ಗೊತ್ತಾ?
Views: 76
ಕನ್ನಡ ಕರಾವಳಿ ಸುದ್ದಿ: ಸೀರಿಯಲ್ ನಟಿ ಸುಷ್ಮಾ ಶೇಖರ್ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಲಕುಮಿ, ಯಾರೇ ನೀ ಮೋಹಿನಿ, ಕನಕ, ಗಿಣಿರಾಮ ಸೀರಿಯಲ್ನಲ್ಲಿ ಅಭಿನಯಿಸಿರೋ ಸುಷ್ಮಾ ಶೇಖರ್ ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿದ್ದಾರೆ. ಕನ್ನಡ ಸೇರಿದಂತೆ ತೆಲಗು ಭಾಷೆಯಲ್ಲೂ ಅಭಿನಯಿಸಿದ್ದಾರೆ.
ಇತ್ತೀಚಿಗೆ ಕನ್ನಡ ಕಿರುತೆರೆಯಿಂದ ದೂರ ಉಳಿದಿರೋ ಸುಷ್ಮಾ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ಕೆಲದಿನಗಳ ಹಿಂದೆ ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ನಟಿ.ಮೂವರು ಸಹೋದರಿಯರ ಪೈಕಿ ಸುಷ್ಮಾ ಕೊನೆಯವರು. ಮೂವರು ಸಹೋದರಿಯರು ಅಭಿನಯಲ್ಲಿ ತೊಡಗಿಸಿಕೊಂಡವರಲ್ಲಿ. ಹೆಚ್ಚು ಪ್ರಚಲಿತದಲ್ಲಿರೋದು ಸುಷ್ಮಾ ಶೇಖರ್.






