ಜನಮನ
ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಪೇದೆ; ಇನ್ಸ್ ಪೆಕ್ಟರ್ ಪರಾರಿ!
ಅಬಕಾರಿ ಇನ್ಸ್ ಪೆಕ್ಟರ್ ಗೀತಾ, ಚಾರ್ಜ್ ಶೀಟ್ ನಲ್ಲಿ ಜಮೀನಿನ ಮಾಲೀಕನ ಹೆಸರು ಕೈ ಬಿಡಲು ಸುರೇಶ್ ಎಂಬಾತನಿಗೆ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಂತೆ. ಇದರಂತೆ ಗೀತಾ ಸೂಚನೆ ಮೇರೆಗೆ ಪೇದೆ ದೇವರಾಜು 10 ಸಾವಿರ ಲಂಚ ಪಡೆದುಕೊಂಡಿದ್ದ.

Views: 0
ಮಂಡ್ಯ: ಲಂಚ ಸ್ವೀಕರಿಸುವ ವೇಳೆ ಅಬಕಾರಿ ಪೇದೆ ರೆಂಡ್ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂಗಲ ಅಬಕಾರಿ ಪೊಲೀಸ್ ಠಾಣೆ ಪೇದೆ ದೇವರಾಜು ಲೋಕಾ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದು, ಈ ವೇಳೆ ಅಬಕಾರಿ ಇನ್ಸ್ ಪೆಕ್ಟರ್ ಗೀತಾ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಬಕಾರಿ ಇನ್ಸ್ ಪೆಕ್ಟರ್ ಗೀತಾ, ಚಾರ್ಜ್ ಶೀಟ್ ನಲ್ಲಿ ಜಮೀನಿನ ಮಾಲೀಕನ ಹೆಸರು ಕೈ ಬಿಡಲು ಸುರೇಶ್ ಎಂಬಾತನಿಗೆ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಂತೆ. ಇದರಂತೆ ಗೀತಾ ಸೂಚನೆ ಮೇರೆಗೆ ಪೇದೆ ದೇವರಾಜು 10 ಸಾವಿರ ಲಂಚ ಪಡೆಯುವ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗಮಂಗಲ ಅಬಕಾರಿ ಕಚೇರಿಯಲ್ಲಿ ಲಂಚ ಪಡೆಯುವಾಗ ಮಂಡ್ಯ ಲೋಕಾಯುಕ್ತ ಎಸ್.ಪಿ. ಸಜೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.






