ಸಾಂಸ್ಕೃತಿಕ

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಅನು ಅರೆಸ್ಟ್:ತಂದೆ ಖಿನ್ನತೆಗೆ ಒಳಗಾಗಿ ಕುಸಿದು ಬಿದ್ದು ಸಾವು 

Views: 103

ಚಿತ್ರದುರ್ಗ:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರದುರ್ಗ ಮೂಲಕ ಆರೋಪಿ ಅನು ಅರೆಸ್ಟ್ ಆಗಿದ್ದು ಪೊಲೀಸರ ವಶದಲ್ಲಿದ್ದಾರೆ. ಇತ್ತ ಬಂಧಿತ ಆರೋಪಿಯ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿದೆ. ಆದರೆ ಇದರ ಮಧ್ಯೆ ಆರೋಪಿ ಅನು ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ A7 ಅನು ಕುಮಾರ್ ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆದರೆ ಇತ್ತ ಆರೋಪಿ ಅನು ತಂದೆ ಚಂದ್ರಣ್ಣ (60) ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಚಿತ್ರದುರ್ಗದ ಸಿಹಿನೀರು ಹೊಂಡ ರಸ್ತೆಯ ಬಳಿಯಿರುವ ಮನೆ ಬಳಿ ಏಕಾಏಕಿ ಕುಸಿದು ಬಿದ್ದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮಗ ಅನು ಬಂಧನದಿಂದ ತಂದೆ ಖಿನ್ನತೆಗೆ ಒಳಗಾಗಿದ್ದರಂತೆ.

ಮೊದಲೇ ಹೇಳಿದಂತೆ ಆರೋಪಿ ಅನು ಚಿತ್ರದುರ್ಗ ಮೂಲದವನು. ಚಿತ್ರದುರ್ಗ ನಗರದ ಸಿಹಿ ನೀರು ಹೊಂಡದ ರಸ್ತೆಯಲ್ಲಿರುವ ಈತನ ಮನೆಯಿದೆ. ತಾಯಿ ಜಯಮ್ಮ, ತಂದೆ ಚಂದ್ರಪ್ಪ ದಂಪತಿಯ ಪುತ್ರ ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಇದಕ್ಕಿಂತ ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು.  ಅಕ್ಕನ ಮದುವೆ ಕೂಡ ಮಾಡಿದ್ದನು. ಆದರೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತಿಗೆ ಮರುಳಾಗಿ ಇದೀಗ ಪೊಲೀಸರ ವಶದಲ್ಲಿದ್ದಾನೆ.

Related Articles

Back to top button
error: Content is protected !!