ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ಫಿಕ್ಸ್;ಎಲ್ಲಿ ಯಾವಾಗ ಗೊತ್ತಾ?
Views: 94
ಕನ್ನಡ ಕರಾವಳಿ ಸುದ್ದಿ: ಟಾಲಿವುಡ್ನ ಕ್ಯೂಟ್ ಜೋಡಿಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಬ್ಬರಾಗಿದ್ದಾರೆ. ಸದ್ಯ ಈ ಜೋಡಿ ಶೀಘ್ರದಲ್ಲೆ ಮದುವೆಯಾಗಲಿದೆ ಎನ್ನುವ ಸುದ್ದಿ ಹಬ್ಬಿದೆ. ನಾಲ್ಕು ತಿಂಗಳ ಹಿಂದೆ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಇದೀಗ ಮದುವೆ ದಿನಾಂಕ ಕೂಡ ಫಿಕ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಜೋಡಿ ಇನ್ನೂ ಅಧಿಕೃತವಾಗಿ ಈ ವಿಚಾರವನ್ನು ದೃಢೀಕರಿಸದಿದ್ದರೂ ಈಗಾಗಲೇ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ. ಹೌದು ಟಾಲಿವುಡ್ನ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮುಂಬರುವ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ರಶ್ಮಿಕಾ- ವಿಜಯ್ ಮದುವೆಯೂ ಫೆಬ್ರವರಿ 26, 2026 ರಂದು ನಡೆಯಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಈ ಜೋಡಿ ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣವಾದ ಉದಯಪುರದಲ್ಲಿ ಅದ್ದೂರಿ ‘ರಾಯಲ್ ವೆಡ್ಡಿಂಗ್’ಗೆ ಪ್ಲಾನ್ ಕೂಡ ಮಾಡಿ ಕೊಂಡಿದ್ದಾರಂತೆ. ಕಳೆದ ತಿಂಗಳು, ಅಂದರೆ ಅಕ್ಟೋಬರ್ 3, 2025 ರಂದು ವಿಜಯ್ ಅವರ ಹೈದರಾಬಾದ್ ನಿವಾಸದಲ್ಲಿ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಖಾಸಗಿ ನಿಶ್ಚಿತಾರ್ಥ ನಡೆದಿದೆ. ಇತ್ತೀಚೆಗೆ ರಶ್ಮಿಕಾ ಅವರು ಥಾಮಾ ಸಿನಿಮಾ ರಿಲೀಸ್ ಸಂದರ್ಭ ದಲ್ಲಿ ಎಂಗೆಜ್ ಮೆಂಟ್ ಬಗ್ಗೆ ಸ್ಪಷ್ಟನೆ ನೀಡಿದ್ದರು. ಚಿತ್ರದ ಪ್ರಮೋಷನಲ್ ಈವೆಂಟ್ ವೇಳೆ ರಶ್ಮಿಕಾ ಬಳಿ ನಿಶ್ಚಿತಾರ್ಥದ ರೂಮರ್ ಬಗ್ಗೆ ಕೇಳ ಲಾಯಿತು.ಆಗ ಉತ್ತರಿಸಿದ ರಶ್ಮಿಕಾ ಮಂದಣ್ಣ ʼಎಲ್ಲರಿಗೂ ಈ ಬಗ್ಗೆ ಗೊತ್ತಿದೆʼ ಎಂದಷ್ಟೇ ಎಂದು ನಾಚಿಕೊಂಡಿದ್ದರು.






