ಸಾಂಸ್ಕೃತಿಕ

ರಮ್ಯಾ.ಎಸ್ ಅವರ ‘ವರ್ಣತಂತು-ಜೀವಿಯ ಕೌತುಕ ಜೀವಸಾರ’ಕ್ಕೆಸೂರ್ಯನಾರಾಯಣ ಚಡಗ ಪ್ರಶಸ್ತಿ

Views: 24

ಕನ್ನಡ ಕರಾವಳಿ ಸುದ್ದಿ: ಕಾದಂಬರಿಕಾರ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆ ನೀಡುವ 2025ನೇ ಸಾಲಿನ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ರಮ್ಯಾ ಎಸ್. ಅವರ ‘ವರ್ಣತಂತು-ಜೀವಿಯ ಕೌತುಕ ಜೀವಸಾರ’ ಕಾದಂಬರಿಯನ್ನು ಆಯ್ಕೆ ಮಾಡಲಾಗಿದೆ.

ಮೂವರು ತೀರ್ಪುಗಾರರಿದ್ದ ಸಮಿತಿಯು ಪ್ರಶಸ್ತಿಗೆ ಈ ಕಾದಂಬರಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪತ್ರ, ಸ್ಮರಣಿಕೆ, ₹10 ಸಾವಿರ ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ. ಚಡಗ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಆಯೋಜಿಸಲಾಗುವುದು ಎಂದು ಸ್ಪರ್ಧೆಯ ಸಂಚಾಲಕ ಉಪೇಂದ್ರ ಸೋಮಯಾಜಿ, ಪ್ರಶಸ್ತಿ ಸಮಿತಿಯ ಅಧ್ಯಕ್ಷ ಎನ್‌. ಭಾಸ್ಕರ ಆಚಾರ್ಯ ತಿಳಿಸಿದ್ದಾರೆ

 

Related Articles

Back to top button
error: Content is protected !!