ಸಾಂಸ್ಕೃತಿಕ

ಯೋಗೀಂದ್ರ ಮರವಂತೆ ಅವರ’ಏರೋ ಪುರಾಣ’ ಕೃತಿ ಬಿಡುಗಡೆ ಡಿ.24ಕ್ಕೆ

Views: 1

ಕುಂದಾಪುರ: ಪ್ರಬಂಧಕಾರ ಯೋಗೀಂದ್ರ ಮರವಂತೆ ಅವರ ‘ಏರೋ ಪುರಾಣ’ ಕೃತಿ ಬಿಡುಗಡೆ ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಐ. ವಸಂತಕುಮಾರಿ ಕಲಾಂಗಣದಲ್ಲಿ ಡಿ. 24ರ ಸಂಜೆ 4ಕ್ಕೆ ನಡೆಯುವುದು.

ಕುಮಟಾದ ಕತೆ, ಕಾದಂಬರಿಕಾರ, ವಿಮರ್ಶಕ ಶ್ರೀಧರ ಬಳಗಾರ ಕೃತಿ ಲೋಕಾರ್ಪಣೆ ಮಾಡುವರು. ಕುಂದಾಪುರದ ಬಿ. ಬಿ. ಹೆಗ್ಡೆ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಕವಿ. ಕತೆಗಾರ, ವಂಡ್ಸೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೀವ್ ನಾಯ್ಕ ಕೃತಿ ಪರಿಚಯ ಮಾಡುವರು. ಎಲ್ಲ ಸಾಹಿತ್ಯಾಸಕ್ತರಿಗೆ ಸ್ವಾಗತ ಎಂದು ಪ್ರಕಟಿಸಲಾಗಿದೆ.

Related Articles

Back to top button
error: Content is protected !!