ರಾಜಕೀಯ

ಯದುವೀರ್ ಆಸ್ತಿ ಘೋಷಣೆ..! ಸ್ವಂತ ಮನೆ, ಜಮೀನು, ಕಾರು ಇಲ್ಲ..!

Views: 75

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಒಡೆಯವರು ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್‌ 01 ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ‌ ಶ್ರೀವತ್ಸ ಜೊತೆ ಸೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈ ವೇಳೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಘೋಷಿಸಿದ್ದಾರೆ. ಅವರ ನಾಮಪತ್ರದ ಪ್ರಕಾರ, ಅವರ ಒಟ್ಟು ಆಸ್ತಿ ಕೇವಲ 5 ಕೋಟಿ ರೂಪಾಯಿ ಆಗಿದೆ. ಹೌದು ಅಚ್ಚರಿ ಅನಿಸಿದರು ಇದು ಸತ್ಯ. ರಾಜರ ವಂಶಸ್ಥರಾದ ಅವರ ಆಸ್ತಿ ಕೇವಲ 5 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಮತ್ತು ಅವಲಂಬಿತ ವ್ಯಕ್ತಿ ಕ್ರಮವಾಗಿ 1.04 ಕೋಟಿ ಮತ್ತು 3.64 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದಕ್ಕಿಂತಲೂ ಅಚ್ಚರಿಯ ವಿಚಾರ ಅಂದರೆ, ಒಡೆಯರ್ ಅವರು 3.39 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ 1.02 ಕೋಟಿ ರೂಪಾಯಿ ಮೌಲ್ಯದ ಅಮೂಲ್ಯ ಚಿನ್ನ-ಬೆಳ್ಳಿ ಹೊಂದಿದ್ದಾರೆ. ಅವರ ನಾಮಪತ್ರದ ಪ್ರಕಾರ ಅವರು ಸ್ವಂತ ಮನೆ, ಜಮೀನು, ಕಾರು ಸಹ ಹೊಂದಿಲ್ಲವಂತೆ. ಹೌದು ಇದನ್ನು ಕೇಳಿ ನಿಮಗೂ ಅಚ್ಚರಿ ಎನಿಸಬಹುದು. ಅವರ ಹೆಸರಿನಲ್ಲಿ ಯಾವುದೇ ಮನೆಯಿಲ್ಲ, ಜಮೀನು ಇಲ್ಲ ಜೊತೆಗೆ ಕಾರು ಸಹ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಕೈಯಲ್ಲಿ 1 ಲಕ್ಷ ರೂಪಾಯಿ ನಗದು, ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ 1.36 ಕೋಟಿ ರೂಪಾಯಿ ಹಣ, ಇದರ ಜೊತೆಗೆ 3.25 ಕೋಟಿ ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 4.99 ಕೋಟಿ ರೂಪಾಯಿ ಚರಾಸ್ತಿಯನ್ನು ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಘೋಷಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಯದುವೀರ್‌ ಅವರು ಯಾವುದೇ ರೀತಿಯ ಸ್ಥಿರಾಸ್ತಿ ಹೊಂದಿಲ್ಲ ಎಂದು ಘೋಷಿಸಿದರು.

Related Articles

Back to top button
error: Content is protected !!