ಕರಾವಳಿ

ಯಡಮೊಗೆಯಲ್ಲಿ ಹಳೆ ಲಾರಿ ಚಾಸ್ಸಿಯಲ್ಲಿ  ಸೇತುವೆ ನಿರ್ಮಾಣ, ಸಂಪರ್ಕವೇ ಇಲ್ಲದೆ ಕಂಗಾಲಾಗಿದ್ದ ಗ್ರಾಮಸ್ಥರು ನಿಟ್ಟುಸಿರು!

Views: 130

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಯಡಮೊಗೆಯಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಮಳೆಗಾಲದಲ್ಲಿ ಕಿರು ಸೇತುವೆ ಇಲ್ಲದೆ ಕಂಗಾಲಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ತಮ್ಮ ಕ್ಷೇತ್ರದ ಜನರಿಗೆ ನೆರವು ನೀಡುವ ಉದ್ದೇಶಕ್ಕೆ ಕ್ರೌಡ್‌ ಫಂಡಿಂಗ್ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಳೆ ಲಾರಿಯ ಚಾಸ್ಸಿ ಬಳಸಿ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ.

ಮಳೆಗಾಲದಲ್ಲಿ ಆಗುವ ಸಾವು- ನೋವು ತಪ್ಪಿಸಲು ಸಮೃದ್ಧ ಬೈಂದೂರು ಮತ್ತು ಅರುಣಾಚಲ ಟ್ರಸ್ಟ್ ಸಹಭಾಗಿತ್ವದಲ್ಲಿ ಸೇತುವೆ ನಿರ್ಮಿಸಲಾಗಿದೆ.

ಮಳೆಗಾಲದಲ್ಲಿ ಸುಮಾರು 30 ಮನೆಗಳಿಗೆ ಸಂಪರ್ಕವೇ ಇಲ್ಲದೇ ಕಂಗಲಾಗಿದ್ದರು. ಮೂರು ಲಾರಿಗಳ ಹಳೆಯ ಚಾಸ್ಸಿ ಬಳಸಿ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಡಿಮೆ ಖರ್ಚಿನಲ್ಲಿ ಲಾರಿಯ ಚಾಸ್ಸಿ, ಬೋರ್ ವೇಲ್ ಪೈಪ್, ಜಿಎ ಪೈಟ್, ಕಬ್ಬಿಣ ತಗಡು ಬಳಸಿ ಸೇತುವೆ ನಿರ್ಮಿಸಲಾಗಿದೆ. ಅಂದಾಜು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಿರು ಸೇತುವೆ ನಿರ್ಮಿಸಲಾಗಿದೆ.

Related Articles

Back to top button