ಯಕ್ಷಗಾನ ಕಲಾವಿದರ ಅವಹೇಳನ ಹೇಳಿಕೆ; ಬಿಳಿಮಲೆಯವರ ವಿರುದ್ಧ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಖಂಡನೆ
Views: 38
ಕನ್ನಡ ಕರಾವಳಿ ಸುದ್ದಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಘನ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಬಿಳಿಮಳೆಯವರು ಇತ್ತೀಚೆಗೆ ಮೈಸೂರು ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ಧರೆಗೆ ದೊಡ್ಡವರು ಎಂಬ ಏಳು ಪಠ್ಯಗಳು ಹಾಗೂ ..ನಾವು ಕೂಗುವ ಕೂಗು.. ಕೃತಿಗಳ ಬಿಡುಗಡೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಯಕ್ಷಗಾನ ಕಲಾವಿದರು ಸಲಿಂಗ ಕಾಮಿಗಳು ಎಂದು ಹೇಳುವುದರ ಮೂಲಕ, ಈ ಪುಣ್ಯ ನೆಲದ ಹೆಮ್ಮೆಯ ಯಕ್ಷಗಾನದ ಯಕ್ಷ ಕಲಾವಿದರ ಭಾವನೆಗಳಿಗೆ ಘಾಸಿ ಮಾಡುವದರ ಮೂಲಕ ಯಕ್ಷಗಾನ ಕಲೆಗೆ ಅವಮಾನ ಮಾಡಿದ್ದಾರೆ.
ಯಕ್ಷಗಾನ ಕಲೆಯು ಒಂದು ದೊಡ್ಡ ಬಯಲು ವಿಶ್ವವಿದ್ಯಾಲಯ ಇದ್ದಂತೆ ಅವಿದ್ಯಾವಂತರು ಕೂಡ ನೋಡಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದಾರೆ.. ನಮ್ಮ ನಾಡಿನ ಶ್ರೀಮಂತ ಕಲೆ ಎಂದು ಗೌರವಿಸುತ್ತಾ ಬರುತ್ತಿದ್ದಾರೆ…ಇಂತಹ ಸಂಧರ್ಭದಲ್ಲಿ, ಬಿಳಿಮಲೆಯವರ ಬಾಯಿಂದ ಇಂತಹ ಮಾತುಗಳು ಬರುತ್ತಿರೋದು ಖಂಡನೀಯ ಯಕ್ಷಗಾನ ಕಲಾವಿದರು ತಮ್ಮ ಜೀವನ ಪೂರ್ತಿ ಯಕ್ಷ ಕಲೆ ಉಳಿಸಿ ಬೆಳಸಲು ಅವಿರತ ದುಡಿಯುತ್ತಿದ್ದಾರೆ, ಇಂತಹ ಕೆಟ್ಟ ಮಾತುಗಳನ್ನು ಹೇಳಿದ ಬಿಳಿಮಲೆಯವರು ಯಕ್ಷಗಾನ ಕಲಾವಿದರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಇಂತಹ ಕೆಟ್ಟ ಮಾತುಗಳಿಂದ ಕಲಾವಿದರನ್ನು ಕಡೆಗಣಿಸುವ ಅವಮಾನಿಸುವ ಹೇಳಿಕೆಗಳನ್ನು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಘಟಕ ಖಂಡಿಸುತ್ತದೆ, ಎಂದು ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿಯವರು ಹೇಳಿದರು






