ಯಕ್ಷಗಾನದ ಹೆಸರಾಂತ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

Views: 68
ಬೆಂಗಳೂರು:ಗಳೂರು : ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಇತ್ತೀಚಿಗೆ ಪ್ರದಾನ ಮಾಡಲಾಯಿತು.

ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಹಾಸ್ಯ ಕಲಾವಿದರಾಗಿದ್ದು, ಕಳೆದ 8 ವರ್ಷಗಳಿಂದ ಇದೇ ಮೇಳದಲ್ಲಿ ತಿರುಗಾಟ ನಡೆಸುತ್ತಾ ಬಂದಿದ್ದಾರೆ.ಮಂಗಳಾದೇವಿ ಮೇಳದಲ್ಲಿ 5 ವರ್ಷ, ಸುಂಕದಕಟ್ಟೆ ಮತ್ತು ಸಸಿಹಿತ್ಲು ಮೇಳದಲ್ಲಿ 4 ವರ್ಷ, ಬಾಚಕೆರೆ ಮೇಳದಲ್ಲಿ 3 ವರ್ಷ, ಕರ್ನಾಟಕ ಮೇಳ ಹಾಗೂ ಕದ್ರಿ ಮೇಳದಲ್ಲಿ 1 ವರ್ಷ ಕಲಾವಿದರಾಗಿ ತಿರುಗಾಟ ನಡೆಸಿದ್ದಾರೆ.

ಕೋಡಪದವು ಈಶ್ವರ ಶೆಟ್ಟಿಗಾರ್ ಮತ್ತು ಲೀಲಾವತಿ ದಂಪತಿಯ ಸುಪುತ್ರರಾದ ದಿನೇಶ್ ಶೆಟ್ಟಿಗಾರ್, ಕೋಡಪದವು’ ಕುಸಾಲ್ದ ಗುರಿಕ್ಕಾರೆ’ “ಕುಸಲ್ದ ಗುರಿಕಾರೆ”, “ಯಕ್ಷಮಾಣಿಕ್ಯ”, ”ಹಾಸ್ಯದರಸು” ಇತ್ಯಾದಿ ಬಿರುದುಗಳನ್ನು ಪಡೆದಿದ್ದಾರೆ.

ತುಳು ಭಾಷೆಯ ಯಕ್ಷಗಾನ ಪ್ರಸಂಗಗಳಾದ ಬನತ ಬಂಗಾರ್, ಬನತ ಬಬ್ಬರ್ಯೆ, ನಿಧಿ ನಿರ್ಮಲ, ಬಾಲೆ ಭಗವಂತದಂತಹ ಪ್ರಸಂಗಗಳಲ್ಲಿ ಕ್ರಮವಾಗಿ ನರಸಿಂಹ, ಪೈಕುಲ, ಚಾವುಂಡರಾಯ, ಗುಡ್ಡಪ್ಪ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆಗಳಿಸಿದ್ದಾರೆ.

ಕನ್ನಡ ಭಾಷೆಯ ಯಕ್ಷಗಾನ ಪ್ರಸಂಗದ ಅಭಿಮನ್ಯು ಚಂಡ-ಮುಂಡ, ಸುಧನ್ವ ಬಬ್ರುವಾಹನ, ಕಮಲಧ್ವಜ, ಕೃಷ್ಣ ಬಲರಾಮ, ಪ್ರಹ್ಲಾದ, ಲೋಹಿತಾಶ್ವದಂತಹ ಪುಂಡು ವೇಷಧಾರಿಯಾಗಿಯೂ ಮಾಲಿನಿಧೂತ, ವಿದ್ಯುನ್ಮಾಲಿದೂತ, ಚಿಕ್ಕ, ದಾರುಕ, ಮಕರಂದ, ಪ್ರಾತಿಕಾಮಿಯಂತದ ಹಾಸ್ಯ ಪಾತ್ರಧಾರಿಯಾಗಿಯೂ, ನಾರದ ಮುಂತಾದ ಪ್ರಸಂಗಗಳಲ್ಲಿ ಅಭಿನಯಿಸಿ ಬೇಷ್ ಎನಿಸಿಕೊಂಡಿದ್ದಾರೆ.






