ಮೋದಿ, ಪಂಜಾಬ್ ಮುಖ್ಯಮಂತ್ರಿಗೆ ಖಲಿಸ್ತಾನಿ ಉಗ್ರ ಪನ್ನುನ್ ಜೀವ ಬೆದರಿಕೆ

Views: 23
ನವದೆಹಲಿ, ಭದ್ರತೆಯಿಲ್ಲದೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗಹಿಸುವ ಧೈರ್ಯ ಮಾಡಿ ನೋಡಿ ಎಂದು ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಮತ್ತು ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ , ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಬೆದರಿಕೆ ಹಾಕಿದ್ದಾನೆ.ಸುದ್ದಿ ಸಂಸ್ಥೆಯೊಂದಕ್ಕೆ ಬಿಡುಡಗಡೆ ಮಾಡಿರುವ ಎರಡು ವೀಡಿಯೊಗಳಲ್ಲಿ ನೇರವಾಗಿ ಪ್ರಧಾನಿಗೆ ಬೆದರಿಕೆ ಹಾಕಿದ್ದು , ಈ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ನಡೆಯಲಿರುವ ಸ್ಥಳ ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.ಉದ್ದೇಶಿತ ವಿಡಿಯೋ ಒಂದರಲ್ಲಿ, “ಮೋದಿ ಅವರೇ ನನಗೆ ಧೈರ್ಯವಿದೆ, ನಿಮ್ಮ ಭದ್ರತೆಯಿಲ್ಲದೆ ನೀವು ದೆಹಲಿಗೆ ಬನ್ನಿ” ಎನ್ನುವ ವಿಡಿಯೋ ಹರಿ ಬಿಡಲಾಗಿದೆ. ಮತ್ತೊಂದು ವಿಡಿಯೋದಲ್ಲಿ “ನೀವು ಜನಪ್ರಿಯ ನಾಯಕರಾಗಿದ್ದರೆ, ಭದ್ರತೆ ಇಲ್ಲದೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾಗಿ ನೋಡೋಣ ಎಂದು ಸವಾಲು ಹಾಕಿದ್ದಾನೆ.ಖಲಿಸ್ತಾನ್ ಧ್ವಜವನ್ನು ಹಾರಿಸುವ ಮೂಲಕ ಶಹೀದ್ ನಿಜ್ಜರ್ ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಆತ ಗುಡುಗಿದ್ದಾನೆ
ಪಂಜಾಬ್ ಸಿಎಂ ಕೊಲ್ಲುವ ಬೆದರಿಕೆ
ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರನ್ನು ಕೊಲ್ಲುವುದಾಗಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ ಈ ಸಂಬಂಧ ಪನ್ನೂನ್ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರಿಗೂ ಇದೇ ಬೆದರಿಕೆ ಹಾಕಿದ್ದಾರೆ.ನಿಷೇಧಿತ ಸಂಘಟನೆಯಾದ ಎಸ್‌ಎಫ್‌ಜೆಗೆ ಸೇರುವಂತೆ ಮತ್ತು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸದಂತೆ ಉನ್ನತ ರಾಜಕೀಯ ನಾಯಕರನ್ನು ತಡೆಯುವಂತೆ ಪನ್ನುನ್ ರಾಜ್ಯದ ದರೋಡೆಕೋರರನ್ನು ಕೇಳಿಕೊಂಡಿದ್ದಾರೆ ಎಂದು ವರದಿ ಮಾಡಿದೆ.ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರೊಂದಿಗೆ ಹೋಲಿಸಿದ್ದಾರೆ,1995 ರ ಆಗಸ್ಟ್ 31ರಂದು ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು.ಈ ಸ್ಫೋಟದಲ್ಲಿ ಇತರ 17ಜನರನ್ನು ಬಲಿ ತೆಗೆದುಕೊಂಡಿತು. ನಿಷೇಧಿತ ಭಯೋತ್ಪಾದಕ ಗುಂಪು – ಬಬ್ಬರ್ ಖಾಲ್ಸಾ ಇಂಟನ್ರ್ಯಾಷನಲ್ ಸ್ಫೋಟ ನಡೆಸಿತ್ತು. ಅದೇ ಮಾದರಿಯಲ್ಲಿ ಭಗವಂತ್ ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ






