ಮೊಬೈಲ್ ನಲ್ಲಿ ಬೇರೆ ವ್ಯಕ್ತಿಯ ಜೊತೆಯಲ್ಲಿ ಮಾತನಾಡಿದ್ದಕ್ಕೆ.. ಗಂಡನಿಂದ ಹತ್ಯೆಯಾದರೆ.. ಶಿಲ್ಪ ಬೋಪಣ್ಣ?

Views: 184
ಮಡಿಕೇರಿ: ಗಂಡನಿಂದಲೇ ಕೊಲೆಯಾದ ಶಿಲ್ಪ ಬೋಪಣ್ಣ (34) 18 ವರ್ಷದ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು. ಇಬ್ಬರು ಕೂಡ ಬೇರೆ ಬೇರೆ ಆಗಿದ್ರಂತೆ. ಇಬ್ಬರು ಕೂಡ ಒಂದೆ ಮನೆಯಲಿದ್ದರು. ಬೇರೆ ಬೇರೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರಂತೆ. ಇಬ್ಬರ ಕುಟುಂಬದಲ್ಲಿ ಬಿರುಕು ಮೂಡಿದ್ದು ವಿಚ್ಛೇದನಕ್ಕೆ ಅರ್ಜಿ ಕೂಡ ಹಾಕಿದರಂತೆ. ನಿನ್ನೆ ರಾತ್ರಿ ಮೃತ ಶಿಲ್ಪ ಮೊಬೈಲ್ನಲ್ಲಿ ಬೇರೆ ವ್ಯಕ್ತಿಯ ಜೊತೆಯಲ್ಲಿ ಮಾತಾಡುತ್ತಿದ್ದರಂತೆ. ಬೆಳಗ್ಗೆ 8.45ರ ಸುಮಾರಿಗೆ ಮತ್ತೆ ಆ ವ್ಯಕ್ತಿಯ ಜೊತೆಯಲ್ಲಿ ಮಾತುಕತೆ ನಡೆಸುತ್ತಿದ್ದರಂತೆ.
ಅದೇ ವೇಳೆ ಅಡುಗೆ ಮನೆಗೆ ಕೋವಿ ಸಮೇತ ಆಗಮಿಸಿದ ಗಂಡ ಬೋಪಣ್ಣ ಶಿಲ್ಪಳ ಎದೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ. ನಂತರ ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ. ವಿರಾಜಪೇಟೆ ಮಲಬಾರ್ ರಸ್ತೆಯ ಅರ್ಜಿಯಲ್ಲಿ ಸ್ವಂತ ಸರ್ವೀಸ್ ಸ್ಟೇಷನ್ ಹೊಂದಿದ್ದ ಬೋಪಣ್ಣ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಶಿಲ್ಪಾಳಿಗೆ ಮೊದಲ ಪಿಯುಸಿ ಹಾಗೂ 7ನೇ ತರಗತಿ ಓದುವ ಎರಡು ಹೆಣ್ಣು ಮಕ್ಕಳು ಇದ್ದಾರೆ. ಅಮ್ಮನನ್ನು ಕಳೆದುಕೊಂಡು ಮಕ್ಕಳಿಬ್ಬರು ಒಬ್ಬಂಟಿಯಾಗಿದ್ದಾರೆ. ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾದ ಆಕೆ ಹೀಗೆ ದಾರುಣವಾಗಿ ಅಂತ್ಯ ಕಂಡಿರೋ ವಿಪರ್ಯಾಸವೇ ಸರಿ.