ಸಾಮಾಜಿಕ

ಮೊದಲ ಪತಿಗೆ ಡಿವೋರ್ಸ್ಸ್, ಸಬ್ ಇನ್ಸ್‌ಪೆಕ್ಟರ್ ಜತೆ ಶಾಲಿನಿ 2ನೇ ಮದುವೆ, ವರ್ಷದೊಳಗೆ ಆತ್ಮಹತ್ಯೆ

Views: 138

ಕನ್ನಡ ಕರಾವಳಿ ಸುದ್ದಿ: ಸಬ್ ಇನ್ಸ್‌ಪೆಕ್ಟರ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಎಚ್‌ ಬಿಆರ್ ಬಡಾವಣೆಯಲ್ಲಿ ನಡೆದಿದೆ.

ಕೆ.ಜಿ.ಹಳ್ಳಿ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಪತ್ನಿ ಶಾಲಿನಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಸೋಮವಾರ ರಾತ್ರಿ ತಮ್ಮ ಮನೆಯಲ್ಲೇ ಶಾಲಿನಿ ನೇಣು ಬಿಗಿದುಕೊಂಡಿದ್ದಾರೆ. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗರಾಜ್ ಅವರನ್ನು ಮದುವೆಯಾಗಲು ಶಾಲಿನಿ ಮೊದಲ ಪತಿಗೆ ವಿಚ್ಛೇದನೆ ನೀಡಿದ್ದರು. ಹೈಸ್ಕೂಲ್‌ನಲ್ಲಿ ಟ್ಯೂಷನ್‌ಮೇಟ್‌ನನ್ನು ಬಯಸಿ 2ನೇ ಮದುವೆಯಾಗಿದ್ದ ಶಾಲಿನಿ ಆತ್ಮಹತ್ಯೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೃತ ಶಾಲಿನಿ ಮತ್ತು ಪಿಎಸ್‌ಐ ನಾಗರಾಜ್ ಇಬ್ಬರೂ ಇಳಕಲ್ ಮೂಲದವರು. ಹೈಸ್ಕೂಲ್‌ನಲ್ಲಿ ಟ್ಯೂಷನ್ ಮೇಟ್ಸ್ ಆಗಿದ್ದರು. ಶಾಲಿನಿ ಎಂಎಸ್ಸಿ ಹಾಗೂ ನಾಗರಾಜ್ ಎಂಜಿನಿಯರಿಂಗ್ ವ್ಯಾಸಂಗಮಾಡಿದ್ದರು. ಇದಾದ ಬಳಿಕ ನಾಗರಾಜ್ ಬೆಂಗಳೂರಿನಲ್ಲಿ  ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅದೇ ವೇಳೆ ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್‌ಗೆ ಪಿಎಸ್‌ಐ ಪರೀಕ್ಷೆ ತಯಾರಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು. ಹೀಗೆ ಮುಂದುವರಿಯುತ್ತಾ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಮೊದಲ ಪತಿಗೆ ವಿಚ್ಚೇದನ ನೀಡಿ ನಾಗರಾಜ್ ನನ್ನು ಶಾಲಿನಿ 2ನೇ ಮದುವೆಯಾಗಿದ್ದು, ಮೃತ ಶಾಲಿನಿಗೆ 7 ವರ್ಷದ ಮಗು ಇದೆ. ಪಿಎಸ್‌ಐ ಆದ ನಂತರ ನಾಗರಾಜ್, ಶಾಲಿನಿಯನ್ನು ದೂರ ಮಾಡಲು ಶುರು ಮಾಡಿದ್ದ. ಮದುವೆ ಆಗದೆ ಮೋಸ ಮಾಡುತ್ತಿದ್ದಾನೆಂದು ಕೋಣನಕುಂಟೆ ಠಾಣೆಯಲ್ಲಿ ನಾಗರಾಜ್ ಮೇಲೆ ಶಾಲಿನಿ ದೂರು ನೀಡಿದ್ದರು. ಆಗ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದರು. ಬಳಿಕ ಶಾಲಿನಿ ಕುಟುಂಬಸ್ಥರ ವಿರೋಧದ ನಡುವೆ 2024ರ ಆಗಸ್ಟ್‌ನಲ್ಲಿ ಮದುವೆಯಾಗಿದ್ದರು. 2 ತಿಂಗಳಿನಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಇದರಿಂದ ಬೇಸತ್ತು ನಾಗರಾಜ್ ಬೇರೆಡೆ ವಾಸವಿದ್ದ, ಪತಿ ಮನೆಗೆ ಬರುತ್ತಿಲ್ಲವೆಂದು ಶಾಲಿನಿ ಸೋಮವಾರ ರಾತ್ರಿ ಕರೆ ಮಾಡಿ ರೈಲಿಗೆ ಸಿಕ್ಕಿ ಸಾಯುತ್ತೇನೆಂದು ಹೇಳಿ ಮನೆಯಿಂದ ಹೊರಟ್ಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ದರು. ಹೊಯ್ಸಳ ಸಿಬ್ಬಂದಿ ಮನೆಗೆ ಬಿಟ್ಟು ತೆರಳುತ್ತಿದ್ದಂತೆ ಶಾಲಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button