ಜನಮನ

ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್‌ ಗೌರವ

Views: 0

ರಸಾಯನಶಾಸ್ತ್ರ ವಿಭಾಗದಲ್ಲಿ ಮೌಂಗಿ ಜಿ.ಬವೆಂಡಿ, ಲೂಯಿಸ್ ಇ. ಬ್ರಸ್ ಮತ್ತು ಅಲೆಕ್ಸಿ ಐ. ಎಕಿಮೊವ್ ಅವರಿಗೆ ನೊಬೆಲ್​ ಪ್ರಶಸ್ತಿ ಪ್ರಕಟಿಸಲಾಗಿದೆ.

ರಸಾಯನಶಾಸ್ತ್ರ ವಿಭಾಗದ 2023ನೇ ಸಾಲಿನ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ಇಂದು ಘೋಷಿಸಲಾಗಿದೆ.

ಮೌಂಗಿ ಜಿ. ಬವೆಂಡಿ, ಲೂಯಿಸ್ ಇ. ಬ್ರಸ್ ಮತ್ತು ಅಲೆಕ್ಸಿ ಐ. ಎಕಿಮೊವ್ ಅವರಿಗೆ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್‌ ಪ್ರಶಸ್ತಿ ಪ್ರಕಟಿಸಿತು.

ಸ್ಟಾಕ್‌ಹೋಮ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಘೋಷಿಸಲಾಗಿದೆ. ಕ್ವಾಂಟಮ್ ಚುಕ್ಕೆಗಳ ಆವಿಷ್ಕಾರ ಮತ್ತು ಅಭಿವೃದ್ಧಿಗಾಗಿ ಪ್ರಶಸ್ತಿ ನೀಡಲಾಗಿದೆ. ಈ ನ್ಯಾನೊಪರ್ಟಿಕಲ್ಸ್​ ಎಷ್ಟು ಚಿಕ್ಕವೆಂದರೆ ಅವುಗಳ ಗಾತ್ರವೇ ಅವುಗಳ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಆದ್ದರಿಂದ ಮೂವರು ವಿಜ್ಞಾನಿಗಳಿಗೆ ಪ್ರತಿಷ್ಟಿತ ನೊಬೆಲ್ ಬಂದಿದೆ.

ಪ್ರಶಸ್ತಿ ವಿಜೇತರ ಬಗ್ಗೆ:ಮೌಂಗಿ ಜಿ.ಬವೆಂಡಿ ಅವರು 1961ರಲ್ಲಿ ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ಜನಿಸಿದ್ದಾರೆ. 1988ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪಿಎಚ್​​ಡಿ ಪೂರೈಸಿರುವ ಇವರು ಕೇಂಬ್ರಿಡ್ಜ್‌ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರೊಫೆಸರ್​ ಆಗಿದ್ದಾರೆ.

ಲೂಯಿಸ್ ಇ. ಬ್ರಸ್ ಅವರು ಅಮೆರಿಕದ ಕ್ಲೀವ್ಲ್ಯಾಂಡ್​ 1943ರಲ್ಲಿ ಜನಿಸಿದ್ದಾರೆ. 1969ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪಡೆದಿದ್ದು, ಇದೇ ವಿವಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಲೆಕ್ಸಿ ಐ ಎಕಿಮೊವ್ ಅವರು ಈ ಹಿಂದಿನ ಸೋವಿಯತ್​ ರಾಷ್ಟ್ರದಲ್ಲಿ ಜನಿಸಿದ್ದಾರೆ. ರಷ್ಯಾದ ಐಓಫೀ ಫಿಸಿಕಲ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್​ನಲ್ಲಿ ಪಿಎಚ್​ಡಿ ಮುಗಿಸಿದ್ದು, ಅಮೆರಿಕದ ನ್ಯಾನೊಕ್ರಿಸ್ಟಲ್ಸ್ ಟೆಕ್ನಾಲಜಿ ಇಂಕ್‌ನ ಮಾಜಿ ಮುಖ್ಯ ವಿಜ್ಞಾನಿಯಾಗಿದ್ದಾರೆ.

Related Articles

Back to top button
error: Content is protected !!