ಜನಮನ

ಮೂಲ್ಕಿ ಹಾಡಹಗಲೇ ಮನೆಯ ಅಂಗಳಕ್ಕೆ ಬಂದು ಚೂರಿ ತೋರಿಸಿ ಚಿನ್ನದ ಕರಿಮಣಿ ಎಗರಿಸಿ ಪರಾರಿ

Views: 0

ಮನೆಯ ಅಂಗಳದಲ್ಲೇ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಎಗರಿಸಿ ಪರಾರಿಯಾದ ಘಟನೆ ಮೂಲ್ಕಿ ಸಮೀಪದ ಬೆಳ್ಳಾಯರುನಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಚಂದ್ರ ಮೌಳೀಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಸ್ ನಿಲ್ದಾಣದ ಬಳಿ ವಾಸ್ತವ್ಯವಿರುವ ಸದಾಶಿವ ಶೆಟ್ಟಿ ಮತ್ತು ಪತ್ನಿ ವಸಂತಿ ಶೆಟ್ಟಿಯವರ ಬಳಿ ಅಪರಿಚಿತ ವ್ಯಕ್ತಿ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ, ಪೆಟ್ರೋಲ್ ತುಂಬಿಸಲು ಬಾಟಲಿ ಬೇಕು ಎಂದು ಕೇಳಿದ್ದಾನೆ. ಈ ಸಂದರ್ಭ ವಸಂತಿ ಶೆಟ್ಟಿ ನೀರಿನ ಖಾಲಿ ಬಾಟಲಿ ಕೊಟ್ಟಿದ್ದು ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ.

ಸ್ವಲ್ಪ ಸಮಯದ ಬಳಿಕ ಪುನಃ ಮತ್ತೆ ಅದೇ ವ್ಯಕ್ತಿ ಬಂದು ಬೇರೆ ಬಾಟಲಿ ನೀಡುವಂತೆ ತಿಳಿಸಿ ವಸಂತಿ ಶೆಟ್ಟಿ ಅವರು ಮನೆಯ ಹೊರಗಡೆ ಬರುವಷ್ಟರಲ್ಲಿ ಮೂವರು ದುಷ್ಕರ್ಮಿಗಳು ಚೂರಿಯಿಂದ ಬೆದರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಎದುರಿಸಿದ್ದಾರೆ.

ವಸಂತಿ ಶೆಟ್ಟಿ ಜೋರಾಗಿ ಬೊಬ್ಬೆ ಹಾಕಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸುಮಾರು ಐದು ಪವನ್ ಚಿನ್ನದ ಕರಿಮಣಿ ಸರ ಎಗರಿಸದ್ದಾರೆ ಎಂದು ವಸಂತಿ ಶೆಟ್ಟಿ, ಮುಲ್ಕಿ ಪೊಲೀಸರಿಗೆ ನೀಡುವ ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ರಾಷ್ಟ್ರೀಯ ಹೆದ್ದಾರಿ ಕೋಲ್ನಾಡ್ ಚಂದ್ರ ಮೌಳೀಶ್ವರ ಕ್ರಾಸ್ ಬಸ್ ನಿಲ್ದಾಣದ ಬಳಿ ಭಾನುವಾರ ಬೆಳಿಗ್ಗೆ ಪಾರ್ಕಿಂಗ್ ಮಾಡಿದ್ದ ಬೆಳ್ಳಾಯರು ನಿವಾಸಿ ಸೂರ್ಯಪ್ರಕಾಶ್ ಭಟ್ ಎಂಬವರ ಬೈಕ್ ಸ್ಥಳದಿಂದ ನಾಪತ್ತೆಯಾಗಿದ್ದು ದುಷ್ಕರ್ಮಿಗಳು ಸರ ಎಗರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಡಿಸಿಪಿ ಕ್ರೈಂ ದಿನೇಶ್ ಕುಮಾರ್, ಎಸಿಪಿ ಮನೋಜ್ ಕುಮಾರ್ ಸುರತ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಮುಲ್ಕಿಎಸ್ಐ ವಿನಾಯಕ ಬಾವಿಕಟ್ಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button
error: Content is protected !!