ಸಾಂಸ್ಕೃತಿಕ

ಮುಂದುವರೆದ ‘ಕಾಂತಾರ’ ಅಬ್ಬರ.. 4 ದಿನಗಳಲ್ಲಿ  ಬರೋಬ್ಬರಿ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ..?

Views: 171

ಕನ್ನಡ ಕರಾವಳಿ ಸುದ್ದಿ: ಕಾಂತಾರ ಪ್ರೀಕ್ವೆಲ್ ಮೂವಿ ಕೇವಲ ನಾಲ್ಕೇ ದಿನಕ್ಕೆ ದಾಖಲೆ ಸೃಷ್ಟಿಸಿದೆ. ಕಲೆಕ್ಷನ್ನಲ್ಲಿ ಹಿಂದೆ ಬೀಳದ ಕಾಂತಾರ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್ ಮಾಡುವಂತೆ ಕಾಣುತ್ತಿದೆ. ರಿಷಬ್ ಶೆಟ್ಟಿಯ ಡೈರೆಕ್ಷನ್, ನಟನೆ ಅಭಿಮಾನಿಗಳನ್ನು ಮೂಕವಿಸ್ಮಿತ ಮಾಡ್ತಿದೆ. 4 ದಿನದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ?

ಕಾಂತಾರ ಚಾಪ್ಟರ್ 1 ಸಿನಿಮಾದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಕಾಂತಾರ ಕಲೆಕ್ಷನ್ ಬರೋಬ್ಬರಿ 335 ಕೋಟಿ ಆಗಿದೆ.

ವರ್ಲ್ಡ್ ವೈಡ್ ಇವತ್ತಿಗೂ ಸಿನಿಮಾಗೆ ಭರ್ಜರಿ ಬೇಡಿಕೆಯಿದ್ದು, ಎಲ್ಲೆಡೆ ಹೌಸ್ ಫುಲ್‌ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ಚಿತ್ರತಂಡ ನಾರ್ಥ್ ಇಂಡಿಯಾದ ಪ್ರವಾಸದಲ್ಲಿದ್ದು, ಅದ್ಭುತ ರೆಸ್ಪಾನ್ಸ್ ಕೇಳಿ ಬರ್ತಿದೆ. ಕಾಂತಾರ ಭಾಗ-2 ಸಿನಿಮಾ ಸುಮಾರು 16 ಕೋಟಿ ರೂಪಾಯಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಇದು ಒಟ್ಟು 400 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೀಗ ಕಾಂತಾರ ಪ್ರೀಕ್ವೆಲ್ ಅಂದಾಜು 125 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು ದೊಡ್ಡ ಮೊತ್ತದಲ್ಲೇ ಹಣ ಗಳಿಕೆ ಮಾಡುತ್ತಿದೆ. ಸದ್ಯ ರಿಷಭ್ ಶೆಟ್ಟಿ ಅವರಿಗೆ ಎಲ್ಲೆಡೆಯಿಂದಲೂ ಅಬಿನಂದನೆಗಳನ್ನು ತಿಳಿಸಲಾಗುತ್ತಿದೆ.

Related Articles

Back to top button
error: Content is protected !!