ಸಾಂಸ್ಕೃತಿಕ

ಮುಂಗಾರು ಮಳೆ ಪೂಜಾ ಗಾಂಧಿಗೆ  ಕನ್ನಡ ಕಲಿಸಿದವನ ಜೊತೆ ಮದುವೆ: ವರನ್ಯಾರು ಗೊತ್ತಾ?

ಮುಂಗಾರು ಮಳೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದ ಪೂಜಾ ಗಾಂಧಿ ಅವರ ವಿವಾಹ ಸಮಾರಂಭ ನ.29 ರಂದು ನಡೆಯಲಿದೆ. ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲಿಕ ವಿಜಯ್‌ ಜತೆ ನಾಳೆ ಅಂದರೆ ನವೆಂಬರ್‌ 29ರಂದು ವಿವಾಹ ನಡೆಯಲಿದೆ ಎಂದು ತಿಳಿದು ಬಂದಿದೆ.

Views: 0

 

ಬೆಂಗಳೂರು: ಮುಂಗಾರು ಮಳೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದ ಪೂಜಾ ಗಾಂಧಿ ಅವರ ವಿವಾಹ ಸಮಾರಂಭ ನಾಡಿದ್ದು ನಡೆಯಲಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲಿಕ ವಿಜಯ್‌ ಜತೆ ನಾಳೆ  ನವೆಂಬರ್‌ 29ರಂದು ವಿವಾಹ ನಡೆಯಲಿದೆ

ಪೂಜಾ ಗಾಂಧಿಗೆ ವಿಜಯ್‌ ಅವರೇ ಕನ್ನಡ ಕಲಿಸಿದ್ದಾರೆ. ಅಂದರೆ, ಬಂಗಾಳಿ ಹುಡುಗಿ ಬೆಂಗಳೂರಿಗೆ ಸಿನಿಮಾ ಕ್ಷೇತ್ರಕ್ಕೆ ಬಂದಾಗ ವಿಜಯ್‌ ಅವರೇ ಕನ್ನಡ ಮಾತನಾಡಲು ಕಲಿಸಿದ್ರು ಎಂದು ಹೇಳಲಾಗಿದೆ. ವಿಜಯ್‌ ನೆರವಿನಿಂದ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ತಾವೇ ಸ್ವತಃ ಕನ್ನಡ ಕಲಿತು ಕನ್ನಡ ಸಿನಿಮಾದಲ್ಲಿ ನಟನೆ ಮತ್ತು ಡಬ್ಬಿಂಗ್‌ ಮಾಡಿದ್ದಾರೆ. ಇವರು ನಾಡಿದ್ದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗಲಿದ್ದಾರೆ.

ಪೂಜಾ ಗಾಂಧಿ ಅವರು ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ನಟಿಸಿದ್ರು. ಬಳಿಕ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಜನಪ್ರಿಯ ಚಿತ್ರನಟಿಗಳಲ್ಲಿ ಒಬ್ಬರಾಗಿದ್ದರು.

2012ರಲ್ಲಿ ಪೂಜಾ ಗಾಂಧಿ ಅವರು ಕೈಗಾರಿಕೋದ್ಯಮಿ ಆನಂದ್‌ ಗೌಡ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಎಂಗೇಜ್‌ಮೆಂಟ್‌ ಆದ ಒಂದೇ ತಿಂಗಳಲ್ಲಿ ಇವರ ಸಂಬಂಧ ಮುರಿದುಬಿದ್ದಿತ್ತು.

ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ಉದ್ಯಮಿ ಆನಂದ್‌ ಗೌಡ ಜತೆ ನಿಶ್ಚಿತಾರ್ಥ ನಡೆದಿತ್ತು. ಪೂಜಾ ಗಾಂಧಿ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಇದಕ್ಕೂ ಮೊದಲು ಸಿನಿಮಾ ವಿತರಕರಾದ ಡಾ. ಕಿರಣ್‌ ಜತೆ ಪೂಜಾ ಗಾಂಧಿ ವಿವಾಹವಾಗಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು.

ವರದಿಗಳ ಪ್ರಕಾರ ಪೂಜಾ ಗಾಂಧಿ ಮತ್ತು ವಿಜಯ್‌ ವಿವಾಹ ನಾಳೆ ಯಲಹಂಕದಲ್ಲಿ ನಡೆಯಲಿದೆ. ಇವರಿಬ್ಬರು ಮಂತ್ರ ಮಾಂಗಲ್ಯ ವಿವಾಹ ಪದ್ಧತಿ ಮೂಲಕ ಸರಳವಾಗಿ ವಿವಾಹ ನಡೆಸಲು ಯೋಜಿಸಿದ್ದಾರೆ.

Related Articles

Back to top button
error: Content is protected !!