ಮಹಾದೇವ್ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸಿದ ಕಿರುತೆರೆ ನಟಿ ಪೂಜಾ ಬ್ಯಾನರ್ಜಿ ನಟಿಯ ರಿಯಲ್ ಸ್ಟೋರಿ! ಇಲ್ಲಿದೆ..

Views: 0
ದೇವೋನ್ ಕೆ ದೇವ್ ಮಹಾದೇವ್ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಕಿರುತೆರೆ ನಟಿ ಪೂಜಾ ಬ್ಯಾನರ್ಜಿ, ನಿಜ ಜೀವನದಲ್ಲಿ ನಾನಾ ಕಷ್ಟಗಳನ್ನು ಎದುರಿಸಿದ್ದಾರೆ.

ಹಿಂದಿಯ “ದೇವೋನ್ ಕೆ ದೇವ್ ಮಹಾದೇವ್” ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಕಿರುತೆರೆ ನಟಿ ಪೂಜಾ ಬ್ಯಾನರ್ಜಿ ನಿಜ ಜೀವನದಲ್ಲಿ ಅನೇಕ ತಿರುವುಗಳಿವೆ. ಎರಡೆರಡು ಮದುವೆಯಾಗಿದ್ದ ಈ ನಟಿಯ ರಿಯಲ್ ಸ್ಟೋರಿ ಇಲ್ಲಿದೆ.

ಚಿಕ್ಕ ವಯಸ್ಸಿನಲ್ಲೇ ನಟಿ ಪೂಜಾ ಮನೆ ಬಿಟ್ಟು ಬಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಪೂಜಾ ಬ್ಯಾನರ್ಜಿ, ತಾನು ಮಾಡಿದ ದೊಡ್ಡ ತಪ್ಪು ಏನೆಂದ್ರೆ 15ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗುವ ನಿರ್ಧಾರ ಮಾಡಿದ್ದು, ಇದಕ್ಕೆ ಈಗಲೂ ಪಶ್ಚಾತ್ತಾಪ ಪಡುತ್ತೇನೆ ಎಂದಿದ್ದಾರೆ.

ಪೂಜಾ ಬ್ಯಾನರ್ಜಿ 15 ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋದರು. ಬಳಿಕ ನಟಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರಂತೆ. ಪೂಜಾ ಬ್ಯಾನರ್ಜಿ 2004 ರಲ್ಲಿ ತನ್ನ ಪ್ರೇಮಿ ಅರುಣಯ್ ಚಕ್ರವರ್ತಿ ಅವರನ್ನು ವಿವಾಹವಾದ್ರು. ಮದುವೆಯಾದ ಕೆಲವು ವರ್ಷಗಳ ನಂತರ 2013 ರಲ್ಲಿ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು.

ಮೊದಲ ಮದುವೆ ಮುರಿದು ಬಿದ್ದ ನೋವನ್ನು ಮರೆತು ಕೆರಿಯರ್ ಕಡೆ ಗಮನ ಹರಿಸಿದ ಪೂಜಾ ಬ್ಯಾನರ್ಜಿ ‘ದೇವೋ ಕೇ ದೇವ್ ಮಹಾದೇವ್’ ಚಿತ್ರದಲ್ಲಿ ಪಾರ್ವತಿ ಪಾತ್ರವನ್ನು ಒಪ್ಪಿಕೊಂಡ್ರು. ಈ ಪಾತ್ರ ನಟಿಗೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಅಷ್ಟೇ ಅಲ್ಲದೆ ನಟಿ ಕಸೌಟಿ ಜಿಂದಗಿ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರು ಅನೇಕ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಈ ಮಧ್ಯೆ ಕಿರುತೆರೆ ನಟ ಕುನಾಲ್ ವರ್ಮಾ ಮತ್ತು ಪೂಜಾ ಬ್ಯಾನರ್ಜಿ ನಡುವೆ ಪ್ರೀತಿ ಅರಳಿತು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು ಮತ್ತು 2021 ರಲ್ಲಿ ಗೋವಾದಲ್ಲಿ ಮದುವೆಯಾದ್ರು. ಆದರೆ ಮದುವೆಗೂ ಮುನ್ನ ಪೂಜಾ 2020ರಲ್ಲಿ ತಾಯಿಯಾದರು.

ಮದುವೆ ಬಗ್ಗೆ ಮಾತನಾಡಿರುವ ಪೂಜಾ, “ನಾವು ಬೆಂಗಾಲಿ ಸಂಪ್ರದಾಯದಂತೆ ಮದುವೆಯಾದೆವು. ಮದುವೆಗೆ ಮುಂಚೆಯೇ ನಮಗೆ ಮಗುವಾಗಿದ್ದರೂ ಮತ್ತೆ ಮದುವೆಯಾಗುವುದು ಹೊಸ ಅನುಭವ. ಇದು ನಮ್ಮ ಸಂಬಂಧದಲ್ಲಿ ಹೊಸತನವನ್ನು ತಂದಿದೆ” ಎಂದಿದ್ದಾರೆ.
ನಮ್ಮ ಸಂಬಂಧಿಕರು ನಮ್ಮನ್ನು ಮದುವೆಯಾದ ನವವಿವಾಹಿತರಂತೆ ನಡೆಸಿಕೊಳ್ಳುತ್ತಿದ್ದರೂ, ನಮ್ಮನ್ನು ಊಟಕ್ಕೆ ಆಹ್ವಾನಿಸುತ್ತಿದ್ದರು. ಹಳೆಯ ಬ್ರೇಕಪ್ ವಿಚಾರ ನನ್ನನ್ನು ಕಾಡಲಿಲ್ಲ ಎಂದ್ರು.






