ಯುವಜನ

ಮನೆಯ ಸುತ್ತಮುತ್ತ ಇರುವ 4 ರಿಂದ11 ವರ್ಷದ ನಾಲ್ವರು ಬಾಲಕಿಯರಿಗೆ ಒಂದು ವರ್ಷ ಅತ್ಯಾಚಾರ ಆರೋಪಿ ಅರೆಸ್ಟ್  

Views: 163

ಕನ್ನಡ ಕರಾವಳಿ ಸುದ್ದಿ: ಮನೆಯ ಸುತ್ತಮುತ್ತ ಇರುವ 4 ರಿಂದ11 ವರ್ಷದ ನಾಲ್ವರು ಬಾಲಕಿಯರಿಗೆ ಒಂದು ವರ್ಷಗಳವರೆಗೆ ಅತ್ಯಾಚಾರ ನಡೆಸಿದ ವ್ಯಕ್ತಿ 54 ವರ್ಷದ ಅಹಮದಾಬಾದ್‌ ನಲ್ಲಿ ಚಂದ್ರಕಾಂತ್‌ ಪಾಟೀಲ್‌ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಆತನ ಮೊಬೈಲ್‌ನಲ್ಲಿ ಕೃತ್ಯದ 30–40 ವಿಡಿಯೊಗಳು ದೊರೆತಿವೆ

ತನಗೆ ಆಗುತ್ತಿರುವ ನೋವಿನ ಕುರಿತು ಒಬ್ಬ ಬಾಲಕಿ ತನ್ನ ತಾಯಿಯಲ್ಲಿ ಇತ್ತೀಚೆಗೆ ಹೇಳಿಕೊಂಡಿದ್ದಳು. ಈ ಬಾಲಕಿಯ ತಾಯಿ ಚಂದ್ರಕಾಂತ್‌ ವಿರುದ್ಧ ದೂರು ನೀಡಿದ್ದರು. ಈತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ವಿವರಿಸಿದರು.

ಮನೆಯಲ್ಲಿ ಒಬ್ಬರೇ ಇರುತ್ತಿದ್ದ ಚಿತ್ರಕಾರ ಚಂದ್ರಕಾಂತ್‌, ತಮ್ಮ ಮನೆಯ ಸುತ್ತಮುತ್ತ ಇರುವ 4ರಿಂದ 11 ವರ್ಷದ ನಾಲ್ವರು ಬಾಲಕಿಯರಿಗೆ ಚಾಕೊಲೇಟ್‌, ಬಿಸ್ಕೆಟ್‌ ಹಾಗೂ ಐಸ್‌ ಕ್ರೀಂಗಳ ಆಸೆ ತೋರಿಸಿ ಅತ್ಯಾಚಾರ ನಡೆಸುತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದರು.

ಅತ್ಯಾಚಾರ ನಡೆಸುತ್ತಿದ್ದ ಈತ ಕೃತ್ಯದ ವಿಡಿಯೊಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಈ ವಿಡಿಯೊಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಲವು ಮಾಡೆಲ್‌ ಹಾಗೂ ನಟಿಯರ ಜೊತೆಯಲ್ಲಿ ತಾನು ನಿಂತುಕೊಂಡಿರುವಂತೆ ಎಡಿಟ್‌ ಮಾಡಿದ ಫೋಟೊಗಳೂ ಈತನ ಮೊಬೈಲ್‌ನಲ್ಲಿ ದೊರೆತಿವೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!