ಇತರೆ
ಮದ್ವೆಯಾಗಲು ಹುಡುಗಿ ಸಿಗಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ

Views: 77
ವಿಜಯನಗರ : ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಮದುವೆಯಾಗಲು ಯುವತಿ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಮಾಡಿಕೊಂಡ ಯುವಕ ಗುಡೇಕೋಟೆ ಗ್ರಾಮದ ಬಿ. ಮಧುಸೂದನ್ (26) ಎಂದು ತಿಳಿದುಬಂದಿದೆ. ಯುವಕನಿಗೆ ಕನ್ಯೆ ಕೊಡಲು ನಿರಾಕರಿಸುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಮನನೊಂದ ಯುವಕ ಇತ್ತೀಚೆಗೆ ಮದ್ಯ ವ್ಯಸನಕ್ಕೆ ದಾಸನಾಗಿದ್ದ,
ಅಲ್ಲದೇ ಇನ್ನು ಮುಂದೆ ನಾನು ಮದುವೆಯಾಗುವುದಿಲ್ಲ ಎಂದು ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.






