ಸಾಮಾಜಿಕ

ಮದುವೆ ಮನೆಯಲ್ಲಿ ಸೀರೆ, ಹಣಕ್ಕಾಗಿ ಜಗಳ: ಭಾವಿ ಪತ್ನಿಯನ್ನೇ ಕೊಂದು ವರ ಎಸ್ಕೇಪ್

Views: 99

ಕನ್ನಡ ಕರಾವಳಿ ಸುದ್ದಿ: ಸೀರೆ, ಹಣಕ್ಕಾಗಿ ಶುರುವಾದ ಜಗಳ ವಧುವಿನ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಗುಜರಾತ್‌ನ ಭಾವನಗರದಲ್ಲಿ ಶನಿವಾರ ನಡೆದಿದೆ. ವಿವಾಹಕ್ಕೆ ಒಂದು ಗಂಟೆ ಮೊದಲು, ಮನೆಯೊಳಗೆ ಮಹಿಳೆಯೊಬ್ಬಳನ್ನು ಆಕೆಯ ನಿಶ್ಚಿತ ವರನೇ ಕೊಂದಿದ್ದಾನೆ

ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ಜೋಡಿಗಳ ನಡುವೆ ಸೀರೆ ಮತ್ತು ಹಣದ ಬಗ್ಗೆ ನಡೆದ ಜಗಳದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಸಜನ್ ಬರಯ್ಯ ಎಂದು ಗುರುತಿಸಲಾಗಿದ್ದು, ಸೋನಿ ಹಿಮ್ಮತ್ ರಾಥೋಡ್ ಕೊಲೆಯಾದ ದುರ್ದೈವಿ. ಪೊಲೀಸರ ಪ್ರಕಾರ, ಆರೋಪಿ ಸಜನ್ ಬರಯ್ಯ ಮತ್ತು ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಅವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಹೆಚ್ಚಿನ ಧಾರ್ಮಿಕ ವಿಧಿಗಳು ಪೂರ್ಣಗೊಂಡಿತ್ತು. ಶನಿವಾರ ರಾತ್ರಿ ಅವರು ಮದುವೆಯಾಗಬೇಕಿತ್ತು.

ಆದರೆ, ಮದುವೆಗೆ ಕೇವಲ ಒಂದು ಗಂಟೆ ಮೊದಲು ಸೀರೆ ಮತ್ತು ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಪದ ಭರದಲ್ಲಿ ಸಾಜನ್, ಸೋನಿಗೆ ಕಬ್ಬಿಣದ ಪೈಪ್‌ನಿಂದ ಹೊಡೆದು, ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಆರೋಪಿ ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿತು.

 

Related Articles

Back to top button
error: Content is protected !!