ಸಾಂಸ್ಕೃತಿಕ

ಮದುವೆಯಾದ ಒಂದೇ ವರ್ಷಕ್ಕೆ ವಿಚ್ಛೇದನ ನೀಡಿ ಸಿನಿಮಾರಂಗ ತೊರೆದು ಸನ್ಯಾಸಿಯಾದ ಸ್ಟಾರ್‌ ನಟಿ..!

Views: 103

ಸಿನಿಮಾ ಲೋಕದಿಂದ ತೊರೆದು ವೃತ್ತಿಜೀವನವು ಉತ್ತಮ ಸ್ಥಿತಿಯಲ್ಲಿದ್ದಾಗ, ಮದುವೆಯಾಗಿ ಚಿತ್ರರಂಗಕ್ಕೆ ಗುಡ್‌ ಬೈ ಹೇಳ್ತಾರೆ.. ಈ ಪೈಕಿ ಸ್ಟಾರ್‌ ನಟಿಯೊಬ್ಬರು ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದು, ಗ್ಲಾಮರ್ ಜಗತ್ತನ್ನು ತೊರೆದು ಸನ್ಯಾಸಿಯಾದವರು ಬಾಲಿವುಡ್ ಬೆಡಗಿ ಸೋಫಿಯಾ ಹಯಾತ್.

ಸೋಫಿಯಾ ಹಯಾತ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಅನೇಕ ಚಿತ್ರಗಳಲ್ಲಿ ವಿಶೇಷ ಹಾಡುಗಳನ್ನು ಹಾಡುವ ಮೂಲಕ ವ್ಯಾಪಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಕಿರುತೆರೆ, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಫೇಮಸ್ ಆಗಿದ್ದರು.

ಬ್ರಿಟನ್‌ನ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸೋಫಿಯಾ ಚಿಕ್ಕ ವಯಸ್ಸಿನಲ್ಲೇ ಬಲವಂತವಾಗಿ ಮದುವೆಯಾದರು. ಆದರೆ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸೋಫಿಯಾ ಬ್ರಿಟನ್ ತೊರೆದು ಭಾರತಕ್ಕೆ ಬಂದರು. 2008 ರಲ್ಲಿ, ಅವರು ಕ್ಯಾಶ್ ಮತ್ತು ಕರಿ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು.

ನಂತರ ಸಿಕ್ಸ್ ಎಕ್ಸ್ ಮತ್ತು ಅಕ್ಸರ್ 2 ಚಿತ್ರಗಳಲ್ಲಿ ನಟಿಸಿದರು. 2013 ರಲ್ಲಿ, FHM ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಮನಮೋಹಕ ಮಹಿಳೆಯರ ಪಟ್ಟಿಯಲ್ಲಿ ಹೆಸರಿಸಲ್ಪಟ್ಟ ಏಕೈಕ ನಟಿ ಎಂಬ ಖ್ಯಾತಿಗೆ ಪಾತ್ರರಾದರು. ರೊಮೇನಿಯನ್ ಉದ್ಯಮಿಯನ್ನು ಮದುವೆಯಾದ ಸೋಫಿಯಾ ಒಂದು ವರ್ಷದೊಳಗೆ ವಿಚ್ಛೇದನ ಪಡೆದರು.

ಅದಾದ ನಂತರ ಕೆಲ ದಿನ ಒಂಟಿಯಾಗಿದ್ದ ಸೋಫಿಯಾ ಗ್ಲಾಮರ್ ಜಗತ್ತನ್ನು ತೊರೆದು ಅಧ್ಯಾತ್ಮ ಜಗತ್ತಿಗೆ ಕಾಲಿಟ್ಟರು. ಭೌತಿಕ ಆನಂದಕ್ಕಿಂತ ಆಧ್ಯಾತ್ಮಿಕ ಮಾರ್ಗವು ಉತ್ತಮವಾಗಿದೆ ಎಂದು ಹೇಳುತ್ತಿದ್ದ ನಟಿ ಅದಕ್ಕಾಗಿ ಈ ಮಾರ್ಗವನ್ನು ಆರಿಸಿಕೊಳ್ಳುಂಡರು

Related Articles

Back to top button
error: Content is protected !!