ಸಾಮಾಜಿಕ

ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ಮುಗಿಸಿದ ಹೆಂಡತಿ 

Views: 311

ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಒಂದೇ ತಿಂಗಳಲ್ಲಿ ಹೆಂಡತಿಯೊಬ್ಬಳು ಗಂಡನನ್ನು ಮುಗಿಸಿದ ಘಟನೆ ತೆಲಂಗಾಣದ ಜೋಗುಳಂಬ ಗದ್ವಾಲ್ ಜಿಲ್ಲೆಯ ತೇಜೇಶ್ವರ್ ದಿಲ್ಲಿ ನಡೆದಿದೆ.

ಭೂ ಮಾಪನ ಇಲಾಖೆಯಲ್ಲಿ ಸರ್ವೇಯರ್ ಆಗಿದ್ದ ತೇಜೇಶ್ವರನಿಗೆ ಕಳೆದ ತಿಂಗಳು ಐಶ್ಚರ್ಯಾ ಜೊತೆ ವಿವಾಹವಾಗಿತ್ತು. ಜೂನ್ 17 ರಂದು ನಾಪತ್ತೆಯಾಗಿದ್ದ ಅದೇ ದಿನ ತೇಜೇಶ್ವರ್ ದೇಹ ಆಂಧ್ರ ಪ್ರದೇಶದ ಕರ್ನೂಲಿನ ಪಣ್ಯ ಮಂಡಲದ ಸುಗಲಿಮೆಟ್ಟಿವಿನಲ್ಲಿ ಪತ್ತೆಯಾಗಿದೆ.

ಭೂಮಿಯನ್ನು ಸರ್ವೇ ನಡೆಸುವ ನೆಪದಲ್ಲಿ ಕಾರಿನಲ್ಲಿ ಕೂರಿಸಿಕೊಂಡು, ಕಾರಿನಲ್ಲೇ ತೇಜೇಶ್ವರ್ ನನ್ನು ಮುಗಿಸಲಾಗಿದೆ. ಬಳಿಕ ದೇಹವನ್ನು ಕರ್ನೂಲ್ ಜಿಲ್ಲೆಗೆ ತಂದು ಸುಗಲಿಮೆಟ್ಟುವಿನಲ್ಲಿ ಎಸೆದು ಹಂತಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ತೇಜೇಶ್ವರನನ್ನು ಮುಗಿಸಿದ್ದು ಬೇರಾರು ಅಲ್ಲ, ಒಂದು ತಿಂಗಳ ಹಿಂದೆಯಷ್ಟೇ ತೇಜೇಶ್ವರ್ ವಿವಾಹವಾಗಿದ್ದ ಪತ್ನಿ ಐಶ್ಚರ್ಯ ಹಾಗೂ ಆಕೆಯ ತಾಯಿ ಸುಜಾತ  ಕರ್ನೂಲ್ ಜಿಲ್ಲೆಯ ಬ್ಯಾಂಕ್ ಉದ್ಯೋಗಿಯೊಬ್ಬರೊಂದಿಗೆ ಐಶ್ಚರ್ಯಾ ಪ್ರೇಮ ಸಂಬಂಧ ಹೊಂದಿದ್ದರಂತೆ. ಬ್ಯಾಂಕ್ ಉದ್ಯೋಗಿಯೇ ತೇಜೇಶ್ವರ್ನನ್ನು ಕೊಲೆ ಮಾಡಿದ್ದಾನೆ. ಇದಕ್ಕಾಗಿ ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ವರ್ಷದ ಮೇ, 18 ರಂದು ತೇಜೇಶ್ವರ್ ಮತ್ತು ಐಶ್ಚರ್ಯಾ ವಿವಾಹ ನಡೆದಿತ್ತು. ಮದುವೆಯಾಗಿ 1 ತಿಂಗಳು ತುಂಬುವ 1 ದಿನ ಮುನ್ನವೇ ನವವಿವಾಹಿತ ಬಲಿಯಾಗಿದ್ದಾನೆ.

ಪೊಲೀಸ್ ವಿಚಾರಣೆಯ ವೇಳೆ ತೇಜೇಶ್ವರ್ ಪತ್ನಿ ಐಶ್ಚರ್ಯಾ ಹಾಗೂ ತಾಯಿ ಸುಜಾತ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಬ್ಯಾಂಕ್ ಉದ್ಯೋಗಿ ಹಾಗೂ ಆತನ ನೇಮಿಸಿದ್ದ ಹಂತಕರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Related Articles

Back to top button
error: Content is protected !!