ಇತರೆ
ಮಗುವನ್ನಪ್ಪಿಕೊಂಡೇ ಜೀವರಕ್ಷಕ ಧರಿಸಿದ್ದ ತಾಯಿ ಜಲಸಮಾಧಿ
Views: 186
ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರದೇಶದ ಜಬಲ್ಪುರದ ನರ್ಮದಾ ನದಿಯಲ್ಲಿ ಗುರುವಾರ ನಡೆದ ದೋಣಿ ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ.
ಈ ವೇಳೆ ಕರುಳು ಹಿಂಡುವ ದೃಶ್ಯವೊಂದು ಕಂಡು ಬಂದಿದೆ. ತಾಯಿಯೊಬ್ಬರು 4 ವರ್ಷದ ಗಂಡು ಮಗುವನ್ನು ಅಪ್ಪಿಕೊಂಡು ಜಲ ಸಮಾಧಿಯಾಗಿದ್ದಾರೆ. ಜೀವರಕ್ಷಕವನ್ನು ಧರಿಸಿದ್ದ ತಾಯಿ ತಾನು ಸಾಯುವ ಮುನ್ನ ಮಗುವನ್ನು ರಕ್ಷಿಸಲು ಎಲ್ಲ ಪ್ರಯತ್ನ ಮಾಡಿದ್ದಾರೆ. ಆದರೆ ಶವವಾಗಿ ಪತ್ತೆಯಾಗಿದ್ದಾರೆ. ಪ್ರಸ್ತುತ ರಕ್ಷಣಾ ಸಿಬ್ಬಂದಿ ಈವರೆಗೆ 24 ಜನರನ್ನು ರಕ್ಷಿಸಿ ದ್ದು, ಈ ಪೈಕಿ 17 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.






