ಕುಂದಾಪುರ: ಹಿಲಿಯಾಣದಲ್ಲಿ ವಿಪರೀತ ಸಾಲಕ್ಕೆ ಹೆದರಿ ನೇಣು ಬಿಗಿದು ಆತ್ಮಹತ್ಯೆ
Views: 126
ಕನ್ನಡ ಕರಾವಳಿ ಸುದ್ದಿ: ವಿಪರೀತ ಸಾಲ ಮಾಡಿಕೊಂಡಿದ್ದ ಹಿಲಿಯಾಣ ಗ್ರಾಮದ ಕಾರೆಕೊಡ್ಲು ನರಸಿಂಹ ನಾಯ್ಕ(44) ಅವರು ಎ.30ರ ಮಧ್ಯರಾತ್ರಿ ಮನೆಯ ಹೊರಗಡೆ ಬಾಗಿಲ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದು ವರ್ಷದ ಹಿಂದೆ ಸಾಲ ಮಾಡಿ ಬೈಕ್ ತೆಗೆದುಕೊಂಡಿದ್ದು, ಅಲ್ಲದೇ ಕೈ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಕಷ್ಟವಾಗುತ್ತೀರುವ ಬಗ್ಗೆ ಪದೇ ಪದೇ ಹೇಳಿಕೊಳ್ಳುತ್ತಿದ್ದರು.
ಎ.30 ರಂದು ರಾತ್ರಿ ಊಟ ಮಾಡಿ ಮನೆಯ ಹಾಲ್ ನಲ್ಲಿ ಮಲಗಿದ್ದು, ಮೇ.1ರಂದು ಮಧ್ಯರಾತ್ರಿ 1:00 ಗಂಟೆ ಸುಮಾರಿಗೆ ಎಚ್ಚರವಾಗಿ ನೋಡಿದಲ್ಲಿ ಗಂಡ ಮನೆಯ ಒಳಗೆ ಇರಲಿಲ್ಲ, ಹೊರಗೆ ಬಂದು ನೋಡಿದಲ್ಲಿ ಮನೆಯ ಹೊರಗಡೆ ಬಾಗಿಲ ಬಳಿ ಮನೆಯ ಮಾಡಿನ ಕಬ್ಬಿಣದ ಪಟ್ಟಿಗೆ ಶಾಲಿನಿಂದ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಕೂಡಲೇ ಅಮ್ಮನನ್ನು ಕೂಗಿ ಕರೆದು ಕತ್ತಿಯಿಂದ ಶಾಲ್ ನ್ನು ತುಂಡು ಮಾಡಿ ಗಂಡನನ್ನು ಕೆಳಗೆ ಇಳಿಸಿ ಉಚರಿಸಿದಲ್ಲಿ ಅವರು ಮಾತನಾಡದೇ ಇದ್ದು, ನಂತರ ನೀರನ್ನು ಕುಡಿಸಿ ನೆರೆಮನೆಯವರನ್ನು ಕೂಗಿ ಕರೆದು ಗಂಡನ ಸಹೋದರರಿಗೆ ಮಾಹಿತಿ ನೀಡಿದ್ದು, ನೆರೆಮನೆಯ ಚಂದ್ರ ರವರು ಅಂಬುಲೆನ್ಸ್ ತರಿಸಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ನರಸಿಂಹ ನಾಯ್ಕನನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪತ್ನಿ ಜಯಂತಿ ದೂರು ನೀಡಿದ್ದು, ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






