ಕರಾವಳಿ

ಮಣಿಪಾಲದಲ್ಲಿ ವೇಶ್ಯಾವಾಟಿಕೆ ದಂಧೆ : ಓರ್ವ ವಶಕ್ಕೆ 

Views: 383

ಕನ್ನಡ ಕರಾವಳಿ ಸುದ್ದಿ: ಉಡುಪಿ ಮಣಿಪಾಲದ ಲಾಡ್ಜ್ ನ ರೂಮ್ ಒಂದರಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಓರ್ವನನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಚುಮಾನ್ ರಾಮ್ ಎಂದು ತಿಳಿದು ಬಂದಿದೆ.

ರಾಮಚಂದ್ರ ನಾಯಕ್‌ ಮಲ್ಪೆ ವೃತ್ತ ನಿರೀಕ್ಷಕರು,ಪ್ರಭಾರ ಪಿಐ ಮಣಿಪಾಲ ಪೊಲೀಸ್‌ ಠಾಣೆ ಇವರಿಗೆ ಬಡಗುಬೆಟ್ಟು ಗ್ರಾಮದ ದಶರಥನಗರದ ಡಿ.ಕ್ಲಾಸಿಕೋ ಲಾಡ್ಜ್‌ ನ ಒಂದನೆ ಮಹಡಿಯಲ್ಲಿನ ರೂಮ್‌ ಒಂದರಲ್ಲಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ನೊಂದ ಮಹಿಳೆಯನ್ನು ರಕ್ಷಿಸಿ ಆರೋಪಿತ ಚುಮಾನ್‌ರಾಮ್‌ ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!