ಕರಾವಳಿ

ಮಣಿಪಾಲದಲ್ಲಿ ಬಿಯರ್ ಬಾಟಲಿಯಿಂದ ಇರಿದು ವ್ಯಕ್ತಿಯ ಕೊಲೆ

Views: 864

ಉಡುಪಿ: ಮಣಿಪಾಲ ಮುಖ್ಯರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಇರಿದು  ಹತ್ಯೆಗೈದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಹೊನ್ನಾವರದ ಕಾಸಕೋಡು ನಿವಾಸಿ ಶ್ರೀಧರ ನಾಯಕ ಎಂದು ಗುರುತಿಸಲಾಗಿದೆ. ಆತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರಲ್ಲಿ ಕುಕ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರರಿಂದ ನಾಲ್ಕು ಜನರಿದ್ದ ತಂಡ ಬೆಳಿಗ್ಗೆ 6 ಗಂಟೆ ಸುಮಾರಿಗೆ ಹೊಡೆದಾಟ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಯಾವುದೋ ವಿಚಾರಕ್ಕೆ ನಡೆದ ಗಲಾಟೆ ಶ್ರೀಧರ್ ಕೊಲೆಯಲ್ಲಿ ಅಂತ್ಯಗೊಂಡಿದ್ದಾನೆ. ಬಾಟಲಿಯಲ್ಲಿ ಇರಿದು ಹತ್ಯೆಗೈದಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಎಸ್ಪಿ ಡಾ.ಅರುಣ್ ಕುಮಾರ್ , ಮಣಿಪಾಲ ಇನ್ಸ್ ಪೆಕ್ಟರ್ ದೇವರಾಜ್, ಮಂಜುನಾಥ್ ತನಿಖೆ ನಡೆಸುತ್ತಿದ್ದಾರೆ.

Related Articles

Back to top button