ಕರಾವಳಿ
ಮಣಿಪಾಲ:ಕಾಲೇಜಿನಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು

Views: 0
ಉಡುಪಿ: ಮಣಿಪಾಲ ಫಾರ್ಮಾಸ್ಯುಟಿಕಲ್ ಸೈನ್ಸ್ ಕಾಲೇಜಿನ ಪ್ರೊ| ಡಾ| ಅಲೆಕ್ಸ್ ಜೋಸೆಫ್ (47) ಹೃದಯಾಘಾತದಿಂದ ಡಿ. 19ರಂದು ಮೃತಪಟ್ಟಿದ್ದಾರೆ.
ಪತ್ನಿ ಅದೇ ಕಾಲೇಜಿನ ಸಹಾಯಕ ಪ್ರೊಫೆಸರ್ ಏಂಜೆಲ್ ಟ್ರೀಸಾ ಅಲೆಕ್ಸ್ ಜತೆ ಬೆಳಗ್ಗೆ ಕಾಲೇಜಿಗೆ ತೆರಳಿದ್ದರು. ಕಾಲೇಜಿನಲ್ಲಿರುವ ವೇಳೆ ಡಾ| ಅಲೆಕ್ಸ್ ಜೋಸೆಫ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅಲೆಕ್ಸ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.