ಮಂಗಳೂರು :ಸತತ ಆರೂವರೆ ಗಂಟೆ ರಕ್ಷಣಾ ಕಾರ್ಯಾಚರಣೆ ಫಲಿಸದೆ ಮಣ್ಣಿನಡಿ ಸಿಲುಕಿದ ಕಾರ್ಮಿಕ ಸಾವು

Views: 47
ಮಂಗಳೂರಿನ ಬಲ್ಮಠ ರಸ್ತೆಯಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದರು. ಮಧ್ಯಾಹ್ನ ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ಸುರಿಯುತ್ತಿರುವ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದರು.
ಬಿಹಾರ ಮೂಲದ ಓರ್ವ ಕಾರ್ಮಿಕ ರಾಜ್ಕುಮಾರ್ ಎಂಬಾತನನ್ನು ಎನ್ಡಿಆರ್ಎಫ್ ತಂಡ ರಕ್ಷಿಸಿದೆ. ಫ್ಲೈವುಡ್ ಮೇಲೆ ಮಣ್ಣು ಕುಸಿದಿದ್ದರಿಂದ ಸ್ವಲ್ಪ ಹೊತ್ತಿನಲ್ಲೇ ಓರ್ವ ಕಾರ್ಮಿಕನನ್ನು ರಕ್ಷಿಸಲಾಯಿತು.
ಮತ್ತೋರ್ವ ಕಾರ್ಮಿಕ ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ ರಕ್ಷಣೆಗೆ NDRF ತಂಡ ಹರಸಾಹಸ ಪಡಬೇಕಾಯಿತು. ಕಾಂಕ್ರಿಟ್ ಗೋಡೆಗೆ ರಂಧ್ರ ತೆಗೆದು ಕಾರ್ಮಿಕನ ಪತ್ತೆ ಹಚ್ಚಿದ ಬಳಿಕ ವೈದ್ಯರ ತಂಡ ಆಕ್ಸಿಜನ್, ಡ್ರಿಪ್ಸ್ ನೀಡಿತು. ಆದ್ರೆ ಕ್ರಮೇಣ ಕಾರ್ಮಿಕನಿಂದ ಸ್ಪಂದನೆ ಕಡಿಮೆಯಾಗುತ್ತಾ ಹೋಗಿದೆ. ಆತನನ್ನ ಹೊರ ತೆಗೆಯಲು ರಕ್ಷಣಾ ತಂಡ ಸುದೀರ್ಘ ಕಾರ್ಯಾಚರಣೆಯನ್ನೇ ನಡೆಸಬೇಕಾಯಿತು. ಇಷ್ಟಾದ್ರೂ ಜೀವಂತವಾಗಿ ಹೊರತೆಗೆಯೋದು ಸಾಧ್ಯವಾಗಲೇ ಇಲ್ಲ.






