ಕರಾವಳಿ

ಮಂಗಳೂರು ಮೀನುಗಾರರ ಬಲೆಗೆ ಬಿದ್ದ 300 ಕೆಜಿ ತೂಕದ ಮುರು ಮೀನು

Views: 0

ಮಂಗಳೂರು:ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಈ ಮುರು ಮೀನು ಸಿಕ್ಕಿದೆ. ಸುಮಾರು 300 ಕೆಜಿಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಲು ಹರಸಾಹಸ ಪಟ್ಟಿದ್ದಾರೆ.

ಸಾಮಾನ್ಯವಾಗಿ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ‌. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣಲು ಸಿಗುವುದು ವಿರಳ. ಹೀಗೆ ಬಲೆಗೆ ಸಿಕ್ಕಿದ ಬೃಹತ್ ಗಾತ್ರದ ಮೀನು ಕೆಜಿಗೆ 200 ರೂಪಾಯಿಗೆ ಮಾರಾಟವಾಗಿದೆಯಂತೆ. ಅಲ್ಲಿಗೆ 300 ಕೆಜಿ ಮೀನಿಗೆ 60 ಸಾವಿರ ರೂಪಾಯಿ ಆಯಿತು. ಒಂದೇ ಬಾರಿಗೆ ಇಷ್ಟು ಬೆಲೆಗೆ ಮಾರಾಟವಾಗಿರುವುದು ಮೀನುಗಾರರ ಮುಖದಲ್ಲಿ ಸಂತಸ ತಂದಿದೆ.

ಸಾಮಾನ್ಯವಾಗಿ ಸಣ್ಣ ಗಾತ್ರದ ಮುರು ಮೀನನ್ನು ನೋಡಿದ ಗ್ರಾಹಕರಿಗೆ ಹಾಗೂ ಮೀನುಗಾರರಿಗೆ 300 ಕೆಜಿ ತೂಕದ ಮುರು ಮೀನು ಅಚ್ಚರಿ ಮೂಡಿಸಿದೆ. ಬಲೆ ಹಾಕಿದ ಮೀನುಗಾರರಿಗೆ ಇದೀಗ ಬಂಪರ್ ಹೊಡೆದಿದ್ದು, ಎಲ್ಲರೂ ಖುಷಿ ಪಟ್ಟಿದ್ದಾರೆ.

Related Articles

Back to top button