ಸಾಂಸ್ಕೃತಿಕ
ಮಂಗಳೂರು ಮಹಮ್ಮಾಯಿ ದೇವಿಗೆ ಉಡುಪಿ ತಾಳಿಪಾಡಿ ಕೈಮಗ್ಗ ಸೀರೆ ಅಲಂಕಾರ

Views: 0
ಮಂಗಳೂರು: ಶ್ರೀವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ದಿನಾಂಕ 25.08.2023.ರಂದು ಶುಕ್ರವಾರ ಜರಗಿದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಗೆ ಮಂಗಳೂರು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಇಲ್ಲಿನ ಮಹಮ್ಮಾಯಿ ದೇವಿಗೆ ಪದ್ಮಶಾಲಿ ಮಹಿಳಾ ವೇದಿಕೆ ವತಿಯಿಂದ ಉಡುಪಿ ಕೈಮಗ್ಗ (ತಾಳಿಪಾಡಿ ಸೊಸೈಟಿ )ಯ ಸೀರೆಯನ್ನು ತೊಡಿಸಿ ಭಕ್ತಾಭಿಮಾನಿಗಳು ಸಂಭ್ರಮಿಸಿದರು.
ಉಡುಪಿ ಸೀರೆ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೈಮಗ್ಗದಲ್ಲಿ ನೇಕಾರರು ಕೈಯಲ್ಲಿ ನೇಯ್ದ ಸೀರೆ ಹೆಸರುವಾಸಿಯಾಗಿದೆ.
ಕೈಮಗ್ಗದ ಸೀರೆಗಳು ಮಾರುಕಟ್ಟೆಯಲ್ಲಿ ಸಿಗುವ ವೈವಿಧ್ಯಮಯ ಸೀರೆಗಳ ನಡುವೆ ಉಡುಪಿಯ ತಾಳಿಪಾಡಿ ಸೀರೆ ಎದ್ದು ಕಾಣುತ್ತಿದೆ. ಈ ಸೀರೆಗಳು ಪ್ರಾದೇಶಿಕ ಇತಿಹಾಸ ಮತ್ತು ಸಂಸ್ಕೃತಿ ಸಾರುತ್ತದೆ..






