ಯುವಜನ

ಮಂಗಳೂರು: ಮದುವೆ ನಿಶ್ಚಯವಾಗಿದ್ದ ಯುವತಿ ಅಪಘಾತಕ್ಕೆ ಬಲಿ.!

Views: 180

ಮಂಗಳೂರು : ನಂತೂರು ಸಮೀಪದ ಬಜ್ಜೋಡಿ ಬಳಿ ಸ್ಕೂಟರ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.

ಕೋಡಿಕಲ್‌ನ ಕ್ರಿಸ್ಟಿ ಕ್ರಾಸ್ತಾ (27) ಮೃತಪಟ್ಟ ಯುವತಿ

ಕ್ರಿಸ್ಟಿ ಕ್ರಾಸ್ತಾ, ಕಂಕನಾಡಿ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರು.ಮದುವೆ ನಿಶ್ಚಯವಾಗಿ, ನವೆಂಬರ್ 23 ರಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಹೊಸ ಬದುಕಿನ ಕನಸು ಹೊತ್ತ ಯುವತಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ. ರವಿವಾರ ಸಂಜೆ ಆಸ್ಪತ್ರೆಯತ್ತ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ನಂತೂರು ಜಂಕ್ಷನ್ ಸಮೀಪದ ಬಜ್ಜೋಡಿ ತಲುಪಿದಾಗ ಸ್ಕೂಟರ್‌ಗೆ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ ಲಾರಿಯು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಕ್ರಿಸ್ಟಿ ಕ್ರಾಸ್ತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Related Articles

Back to top button
error: Content is protected !!