ಕರಾವಳಿ
ಮಂಗಳೂರು: ಬೆಂಗ್ರೆ ಮೀನುಗಾರಿಕೆ ಬೋಟಿಗೆ ಬೆಂಕಿ-ಲಕ್ಷಾಂತರ ರೂ. ನಷ್ಟ.

Views: 0
ಮಂಗಳೂರು: ನಗರದ ಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ಬೆಂಕಿ ಆಕಸ್ಮಿಕವಾಗಿ ಮೀನುಗಾರಿಕಾ ಬೋಟೊಂದು ಸಂಪೂರ್ಣ ಹೊತ್ತಿ ಉರಿದ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮಂಗಳವಾರ ಮುಂಜಾನೆ ಮೀನುಗಾರಿಕೆ ನಡೆಸಲೆಂದು ಹೊರಡುವಷ್ಟರಲ್ಲಿ ಬೆಂಕಿ ದುರಂತ ಸಂಭವಿಸಿದೆ.
ಇನ್ನೂ ಕೆಲವು ಬೋಟುಗಳಿಗೆ ಬೆಂಕಿ ಹರಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಕದ್ರಿ ಮತ್ತು ಪಾಂಡೇಶ್ವರ ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಆಗಮಿಸಿ ಕ್ಷಣಮಾತ್ರದಲ್ಲಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ದುರಂತದಿಂದ ಕೋಟ್ಯಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದೆ. ಬೆಂಕಿಯನ್ನು ನಂದಿಸಲು ಇತರ ಮೀನುಗಾರರು ಕೂಡಾ ಸಹಕರಿಸಿದ್ದಾರೆ.






